ಬೀದಿ ನಾಯಿಗಳ ದಾಳಿಗೆ 2 ವರ್ಷದ ಮಗು ಬಲಿ

ಹೈದರಾಬಾದ್, ಏಪ್ರಿಲ್ 28: ಬೀದಿ ನಾಯಿಗಳು ಎರಡು ವರ್ಷದ ಮಗುವನ್ನು ಕಚ್ಚಿ ಕೊಂದುಹಾಕಿರುವ ದುರದೃಷ್ಟಕರ ಘಟನೆಯೊಂದು ಹೈದರಾಬಾದ್ ನಗರದಲ್ಲಿ ನಡೆದಿದೆ.

ಇಲ್ಲಿನ ಗೋಲ್ಕೊಂಡಾದ ಬಡಾ ಬಜಾರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಮನೆ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಅನಾಸ್ ಅಹ್ಮದ್ ಎಂಬಾತನ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿದೆ. ಬೀದಿ ನಾಯಿಗಳು ರಾತ್ರಿ ಸಮಯದಲ್ಲಿ ದಾಳಿ ಮಾಡಿರು ಗುಂಪುಗಳ ನಾಯಿಗಳ ದಂಡು ಪಕ್ಕದ ಮಿಲಿಟರಿ ಪ್ರದೇಶಕ್ಕೆ ಚಿಕ್ಕ ಮಗುವನ್ನು ಎಳೆದುಕೊಂದು ಹೋಗಿದ್ದವು.

ಮಗುವಿನ ಕಿರುಚಾಟ ಕೇಳಿದ ಪೋಷಕರು ಮತ್ತು ನೆರೆಹೊರೆಯವರು ಆತನ ರಕ್ಷಣೆಗೆ ಧಾವಿಸಿ ನಾಯಿಗಳನ್ನು ಓಡಿಸಿದರು. ಆದರೆ, ಅಂಬೆಗಾಲಿಡುವ ಮಗುವಿನ ಮುಖ ಗಂಟಲು ಮತ್ತು ಮೈ ಮೇಲೆ ಗಂಭೀರವಾದ ಗಾಯವಾಗಿದ್ದವು ಕೂಡಲೇ ತೀವ್ರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದೆ ಎಂದು ವೈದ್ಯರು ಖಚಿತಪಡಿಸಿದರು.

Child deaths due to street dog herd attack

ದುರದೃಷ್ಟಕರ ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿ ಎಳೆದೊಯ್ದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದನ್ನು ಕಂಡ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಐತಿಹಾಸಿಕ ಗೋಲ್ಕೊಂಡಾ ಕೋಟೆಯ ಬಳಿಯ ನಿವಾಸಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಲವು ಬಾರಿ ದೂರು ನೀಡಿದರೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

Child deaths due to street dog herd attack

ಈ ಹಿಂದೆ ಸಂಭವಿಸಿದ ಎರಡು ರೀತಿಯ ಘಟನೆಗಳಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಆದರೆ ಈ ಬಾರಿ ನಾಯಿಗಳ ಕಾಟ ಮಗುವಿನ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ನಿವಾಸಿಗಳಲ್ಲಿ ಸ್ಥಳೀಯ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ನಾಯಿಗಳು ಇಲ್ಲದಿರುವಾಗ ನಾಯಿ ಹಿಡಿಯುವ ಸಿಬ್ಬಂದಿ ಬರುತ್ತಾರೆ, ಸ್ವಲ್ಪ ಸಮಯ ಕಳೆದು ಹೋಗುತ್ತಾರೆ ಎಂದು ನಿವಾಸಿಯೊಬ್ಬರು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+