ಲವ್ ಲೆಟರ್ ಬರೆದ 3ನೇ ತರಗತಿ ವಿದ್ಯಾರ್ಥಿ: ಕೈಕಾಲು ಕಟ್ಟಿದ ಶಿಕ್ಷಕರು

ಹೈದರಾಬಾದ್, ನವೆಂಬರ್ 29: ಲವ್ ಲೆಟರ್ ಬರೆದಿದ್ದಾನೆ ಎಂದು ಮೂರನೇ ತರಗತಿಯ ವಿದ್ಯಾರ್ಥಿಯನ್ನು ಕೈಕಾಲು ಕಟ್ಟಿರುವ ಘಟನೆ ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ.

ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮೂರನೇ ತರಗತಿ ಹಾಗೂ ಐದನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಗಳನ್ನು ಶಾಲಾ ಬೆಂಚಿಗೆ ಕಟ್ಟಿ ಹಾಕಲಾಗಿದೆ.

ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಲವ್ ಲೆಟರ್ ಬರೆದಿದ್ದಾನೆ ಎಂದು ಹಾಗೂ ಐದನೇ ತರಗತಿ ವಿದ್ಯಾರ್ಥಿ ಇತರೆ ವಿದ್ಯಾರ್ಥಿಗಳ ವಸ್ತುಗಳನ್ನು ಕದ್ದಿದ್ದಾನೆ ಎಂದು ಆರೋಪಿಸಿ ಅವರನ್ನು ಕಟ್ಟಿಹಾಕಲಾಗಿದ್ದು, ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Boy Wrote Love Letter Teacher Tied To School Bench

ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ನಾವು ಅವರನ್ನು ಕಟ್ಟಿ ಹಾಕಿಲ್ಲ, ಮಕ್ಕಳ ತಾಯಂದಿರೇ ಅವರನ್ನು ಕಟ್ಟಿ ಹಾಕಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕಿ ತಿಳಿಸಿದ್ದಾರೆ. ಶಾಲೆಯಲ್ಲಿ ಈ ರೀತಿಯ ಹಿಂಸೆಯನ್ನು ಮಕ್ಕಳಿಗೆ ನೀಡಬಾರದು ಎಂದು ವಾರ್ನ್ ಮಾಡಲಾಗಿದೆ.

ವಿದ್ಯಾರ್ಥಿ ಬರೆದಿರುವುದು ಲೀವ್ ಲೆಟರ್ ಅಲ್ಲ ಅದು ಲವ್ ಲೆಟರ್ ಹೀಗಾಗಿ ವಿದ್ಯಾರ್ಥಿಗೆ ಇಂತಹ ಶಿಕ್ಷೆ ನೀಡುವುದು ಅನಿವಾರ್ಯವಾಗಿತ್ತು, ಇನ್ನೊಮ್ಮೆ ಈ ರೀತಿ ಮಾಡಬಾರದು ಎನ್ನುವ ಕಾರಣಕ್ಕೆ ಶಿಕ್ಷೆ ನೀಡಿದ್ದು ಎಂದು ಶಿಕ್ಷಕರು ಸಮಜಾಯಿಷಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+