ಬಿಜೆಪಿ ಶಾಸಕನ ಮೇಲೆ ಪಾಕಿಸ್ತಾನಿ ಸೇನೆಯ ಹಾಡು ನಕಲು ಮಾಡಿದ ಆರೋಪ

ಹೈದರಾಬಾದ್ (ತೆಲಂಗಾಣ), ಏಪ್ರಿಲ್ 15: ಹೈದರಾಬಾದ್ ನ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಠಾಕೂರ್ ರಾಜಾ ಸಿಂಗ್ ಲೋಧಾ ಶನಿವಾರ ಟ್ವಿಟ್ಟರ್ ನಲ್ಲಿ 'ಹಿಂದೂಸ್ತಾನ್ ಜಿಂದಾಬಾದ್' ಎಂಬ ಹಾಡೊಂದನ್ನು ಹಾಡಿದ ವಿಡಿಯೋ ಹಾಕಿದ್ದಾರೆ. ಲೋಧಾ ಪ್ರಕಾರ, ಈ ಹೊಸ ಹಾಡು ರಾಮನವಮಿ ದಿನದಂದು ಬಿಡುಗಡೆ ಮಾಡಿದ್ದಾರೆ.

ತಮ್ಮ ಹಾಡನ್ನು ಠಾಕೂರ್ ರಾಜಾ ಸಿಂಗ್ ಲೋಧಾ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದು, ಪಾಕಿಸ್ತಾನಿ ಸೇನೆಯು ಈ ಸಂಗೀತ ಸಂಯೋಜನೆ ತನ್ನದೆಂದು ಹೇಳಿದೆ. ಮಾರ್ಚ್ 23ನೇ ತಾರೀಕು ಪಾಕಿಸ್ತಾನ ದಿನದ ಪ್ರಯುಕ್ತ ಮಾಧ್ಯಮ ವಿಭಾಗ ಬಿಡುಗಡೆ ಮಾಡಿದ ಹಾಡಿನ ಸಂಗೀತ ಸಂಯೋಜನೆಯನ್ನು ನಕಲು ಮಾಡಲಾಗಿದೆ ಎಂಬುದು ಆರೋಪ.

Raja Singh

ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ ಪಾಕಿಸ್ತಾನ ಸೇನೆಗಾಗಿ ಈ ಹಾಡನ್ನು ಬರೆದವರು ಸಾಹಿರ್ ಅಲಿ ಬಗ್ಗಾ. "ನೀವು ನಕಲು ಮಾಡಿರುವುದರಿಂದ ಸಂತೋಷವಾಗಿದೆ. ಅದೇ ರೀತಿ ಸತ್ಯ ಹೇಳುವುದನ್ನು ಕೂಡ ನಕಲು ಮಾಡಿ" ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಸ್ಥಳೀಯ ಮಾಧ್ಯಮದ ಪ್ರಕಾರ, ಲೋಧಾ ಅವರು 'ಜಿಂದಾಬಾದ್ ಪಾಕಿಸ್ತಾನ್' ಹಾಡನ್ನು ನಕಲು ಮಾಡಿದ್ದಾರೆ. ಅದನ್ನು 'ಜಿಂದಾಬಾದ್ ಹಿಂದೂಸ್ತಾನ್' ಎಂದು ಬದಲಾಯಿಸಿ, ರೆಕಾರ್ಡ್ ಕೂಡ ಮಾಡಿ, ಭಾರತೀಯ ಸಶಸ್ತ್ರ ಸೇನೆಗೆ ಅರ್ಪಣೆ ಮಾಡಿದ್ದಾರೆ.

ಈ ಮಧ್ಯೆ ಶಾಸಕ ಲೋಧಾರ ಅಭಿಪ್ರಾಯ ಪಡೆಯಲು ಯತ್ನಿಸಿದ ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ಎರಡು ಬಾರಿ ಶಾಸಕರಾಗಿರುವ ರಾಜಾ ಸಿಂಗ್, ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿ ಇರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+