ತೆಲಂಗಾಣದಲ್ಲಿ ಮತ್ತೊಂದು ರಕ್ಕಸ ಕೃತ್ಯ : ಇನ್ನೋರ್ವ ಮಹಿಳೆಯ ಸುಟ್ಟ ದೇಹ ಪತ್ತೆ
ಹೈದರಾಬಾದ್ ,ನವೆಂಬರ್ 30: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಸಾಮೂಹಿಕ ಅತ್ಯಾಚಾರ, ಕೊಲೆ ಬೆನ್ನಲ್ಲೇ ತೆಲಂಗಾಣದಲ್ಲಿ ಮತ್ತೊಂದು ರಕ್ಕಸ ಕೃತ್ಯ ನಡೆದೇ ಹೋಗಿದೆ.
ಪ್ರಿಯಾಂಕಾ ರೆಡ್ಡಿ ಅವರನ್ನು ಸುಟ್ಟು ಹಾಕಿದ್ದ ಸೈಟಿನ ಬಳಿಯೇ ಇನ್ನೋರ್ವ ಮಹಿಳೆಯ ಸುಟ್ಟ ದೇಹ ಪತ್ತೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕೆಲಸದ ನಿಮಿತ್ತ ತೆರಳಿದ್ದ ಡಾ. ಪ್ರಿಯಾಂಕಾ ರೆಡ್ಡಿ ವಾಪಸ್ ಬಂದಿರಲಿಲ್ಲ. ಸ್ಕೂಟರ್ ಪಂಕ್ಚರ್ ಆಗಿದೆ ಎಂದಷ್ಟೇ ಮನೆಗೆ ಕರೆ ಮಾಡಿ ತಿಳಿಸಿದ್ದರು. ಇಲ್ಲಿಲಾರಿಗಳಿವೆ ತುಂಬಾ ಭಯವಾಗುತ್ತಿದೆ ಎಂದೂ ಹೇಳಿದ್ದರು. ಕೊನೆಗೆ ಮನೆಗೆ ಬಾರಲೇ ಇಲ್ಲ.

ಮರುದಿನ ಪೋಷಕರು ಪೊಲೀಸರ ಜೊತೆಗೆ ತೆರಳಿದಾಗ ಆಕೆಯ ಸುಟ್ಟ ದೇಹ ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಅಂತಹದ್ದೇ ಘಟನೆಯೊಂದು ಅದೇ ಜಾಗದಲ್ಲಿ ನಡೆದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಪಶುವೈದ್ಯೆಯ ಅತ್ಯಾಚಾರ ಹತ್ಯೆಗೆ ಮೊದಲೇ ಪ್ಲಾನ್ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ವೈದ್ಯೆ ಶಮ್ಶಾಬಾದ್ನಿಂದ ಕೊಲ್ಲುರ್ ಗ್ರಾಮಕ್ಕೆ ತೆರಳಿದ್ದರು. ನಂತರ ಮರಳಿ ಟೋಲ್ ಪ್ಲಾಜಾ ಸಮೀಪ ಸ್ಕೂಟಿ ನಿಲ್ಲಿಸಿ ಮತ್ತೊಂದು ಕಡೆಗೆ ಕ್ಯಾಬ್ನಲ್ಲಿ ತೆರಳಿದ್ದರು.
ಮತ್ತೆ ಬಂದು ಸ್ಕೂಟಿಯಲ್ಲಿ ಸ್ವಲ್ಪ ದೂರ ತೆರಳುವಾಗ ಬೈಕ್ ಪಂಕ್ಚರ್ ಆಗಿರುವುದು ಬೆಳಕಿಗೆ ಬಂದಿದೆ. ಉದ್ದೇಶಪೂರ್ವಕವಾಗಿ ಬೈಕ್ ಪಂಕ್ಚರ್ ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಜೊತೆಗೆ ಅದೇ ರೋಪಿಗಳು ಈ ಹೇಯ ಕೃತ್ಯವನ್ನು ನಡೆಸಿರಬಹುದು ಎಂದೂ ಕೂಡ ಶಂಕಿಸಲಾಗಿದೆ.
ಶಂಶಾಬಾದ್ ಹೊರ ವಲಯದಲ್ಲಿ ಶವ ಪತ್ತೆಯಾಗಿದ್ದು, ಆಟೊಪ್ಸಿಗಾಗಿ ಆಸ್ಪತ್ರೆಗೆ ಶವವನ್ನು ಸಾಗಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications