ಅಕ್ಬರುದ್ದಿನ್ ಓವೈಸಿ ಆರೋಗ್ಯ ಸ್ಥಿತಿ ಚಿಂತಾಜನಕ, ಲಂಡನ್ ನಲ್ಲಿ ಚಿಕಿತ್ಸೆ

ಹೈದರಾಬಾದ್, ಜೂನ್ 10: ಎಐಎಂಐಎಂ ಮುಖಂಡ, ತೆಲಂಗಾಣದ ಚಂದ್ರಾಯನಗುಟ್ಟ ಶಾಸಕ ಅಕ್ಬರುದ್ದಿನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು 'ದಿ ಹಿಂದು' ವರದಿ ಮಾಡಿದೆ.

ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಮತ್ತು ಅಕ್ಬರುದ್ದಿನ್ ಓವೈಸಿ ಅವರ ಸಹೋದರ ಅಸಾದುದ್ದಿನ್ ಓವೈಸಿ ಅವರು ಜನರಿಗೆ ಈದ್ ಹಬ್ಬದ ಶುಭಾಶಯ ತಿಳಿಸಿದ ನಂತರ, ತಮ್ಮ ಸಹೋದರ ಅಕ್ಬರುದ್ದಿನ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಕೋರಿದ್ದಾರೆ.

AIMIM MLA Akbaruddin Owaisis health deteriorated

ಸದ್ಯ ಅಕ್ಬರುದ್ದಿನ್ ಅವರು ಲಂಡನ್ನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕರುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2011 ರಲ್ಲಿ ಅಕ್ಬರುದ್ದಿನ್ ಅವರ ಮೇಲೆ ರೌಡಿ ಶೀಟರ್ ವೊಬ್ಬರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಅಕ್ಬರುದ್ದಿನ್ ಅವರ ದೇಹದ ಹಲವೆಡೆ ಗಾಯಗಳಾಗಿದ್ದವು. ಇದಾದ ನಂತರ ಅವರು ನಿಯಮಿತವಾಗಿ ಲಂಡನ್ನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಅವರ ಆರೋಗ್ಯ ಗಂಭೀರ ಸ್ಥಿತಿ ತಲುಪಿದದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+