ಹೈದರಾಬಾದ್: 2 ವಾರದಲ್ಲಿ 79 ಸರ್ಕಾರಿ ವೈದ್ಯರಿಗೆ ಕೊರೊನಾ ಸೋಂಕು
ಹೈದರಾಬಾದ್, ಜೂನ್ 8: ಕೇವಲ ಎರಡೇ ವಾರಗಳಲ್ಲಿ 79 ಸರ್ಕಾರಿ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Recommended Video
ಈ ಕುರಿತು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ನಾಲ್ಕು ಮಂದಿ ವೈದ್ಯರು ಹಾಗೂ ಮೂವರು ಪ್ಯಾರಾಮೆಡಿಕ್ಸ್‌ಗೆ ಕೊರೊನಾ ಸೋಂಕು ತಗುಲಿದೆ.
ಒಸ್ಮೇನಿಯಾ ಮೆಡಿಕಲ್ ಕಾಲೇಜಿನ 49 ವೈದ್ಯರು, ನಿಮ್ಸ್‌ನ 26 ವೈದ್ಯರು, ಗಾಂಧಿ ಮೆಡಿಕಲ್ ಕಾಲೇಜಿನ ನಾಲ್ವರು ವೈದ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಪ್ರಯೋಗಾಲಯಗಳ ಸಿಬ್ಬಂದಿ, ನರ್ಸ್‌ಗಳು, ಪ್ಯಾರಾಮೆಡಿಕ್ಸ್‌ಗಳಿಗೆ ಕೊರೊನಾ ಸೋಂಕು ತಗುಲಿದೆ.

ಇನ್ನು ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಕೂಡ ಸೋಂಕು ತಗುಲಿದ್ದು, ಅವರು ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲೇ ವೈದ್ಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಜಿ. ಶ್ರೀನಿವಾಸ್ ತಿಳಿಸಿದ್ದಾರೆ.
ಪರೀಕ್ಷೆ ಮೂಲಕವೇ ರೋಗವನ್ನು ಪತ್ತೆಹಚ್ಚಬಹುದು ಅಥವಾ ಗುಣಪಡಿಸಲು ಸಾಧ್ಯ. ತೆಲಂಗಾಣದಲ್ಲಿ 3496 ಕೊರೊನಾ ಸೋಂಕಿತ ಪ್ರಕಟರಣಗಳಿವೆ.1710 ಮಂದಿ ಗುಣಮುಖರಾಗಿದ್ದಾರೆ. 123 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications