ಹೈದರಾಬಾದ್‌ನಲ್ಲಿ 11 ಐಎಸ್‌ಐಎಸ್ ಉಗ್ರರ ಬಂಧನ
ಹೈದರಾಬಾದ್, ಜೂನ್ 29 : ರಾಷ್ಟ್ರೀಯ ತನಿಖಾ ದಳ ಹೈದರಾಬಾದ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 11 ಐಎಸ್‌ಐಎಸ್ ಬೆಂಬಲಿತ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರಿಂದ ಹಣ ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.
ಎನ್‌ಐಎ ಬುಧವಾರ ಮುಂಜಾನೆಯಿಂದ ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದು ಒಟ್ಟು 11 ಉಗ್ರರನ್ನು ಬಂಧಿಸಿದೆ. ಸುಮಾರು 5 ತಿಂಗಳ ಹಿಂದೆ ಐಎಸ್‌ಐಎಸ್ ಬೆಂಬಲಿಸುತ್ತಿದ್ದ ನಾಲ್ವರನ್ನು ನಗರದಲ್ಲಿ ಬಂಧಿಸಲಾಗಿತ್ತು. ಬಂಧಿತರ ವಿಚಾರಣೆ ಬಳಿಕ ಇಂದಿನ ದಾಳಿ ನಡೆದಿದೆ. [ಟರ್ಕಿಯಲ್ಲಿ ISIS ಆತ್ಮಾಹುತಿ ಬಾಂಬರ್ ದಾಳಿ?]

ಶಂಕಿತ ಉಗ್ರರಿಂದ 15 ಲಕ್ಷ ರೂ. ಹಣ ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಅಧಿಕಾರಿಗಳಿ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಹೈದರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.[ISIS ಗೆ ಹೈದರಾಬಾದ್ ನಲ್ಲಿ ಹೆಚ್ಚು ಬೆಂಬಲಿಗರು]
ಗುಪ್ತಚರ ಮಾಹಿತಿ ಮತ್ತು ಬಂಧಿತರ ತನಿಖೆಯಿಂದ ಮಾಹಿತಿ ಪಡೆದು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಬಂಧಿತರು ಸಿರಿಯಾದಲ್ಲಿ ಕೆಲವು ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದರು ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಇವರು ಸಂಚು ರೂಪಿಸಿದ್ದರು. [ಭಟ್ಕಳದ ಶಫಿ ಅರ್ಮರ್ ಮೃತಪಟ್ಟಿಲ್ಲ]












Click it and Unblock the Notifications