Get Updates
Get notified of breaking news, exclusive insights, and must-see stories!

ದಸರಾ ರಜೆ; ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ನೈಋತ್ಯ ರೈಲ್ವೆ

ಹುಬ್ಬಳ್ಳಿ, ಅಕ್ಟೋಬರ್ 10; ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯ ದಸರಾ ಹಬ್ಬದ ಅಂಗವಾಗಿ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳನ್ನು ವಿವಿಧ ರೈಲಿಗೆ ಅಳವಡಿಕೆ ಮಾಡಿದೆ.

ದಸರಾ ಸಂದರ್ಭದಲ್ಲಿ ಹೆಚ್ಚು ಜನರು ಪ್ರಯಾಣ ಮಾಡುವುದರಿಂದ ಆಗುವ ಜನರ ದಟ್ಟಣೆ ತಪ್ಪಿಸಲು ಹಲವು ರೈಲುಗಳಿಗೆ ಹೆಚ್ಚುವರಿಯಾಗಿ 2 ಬೋಗಿಗಳನ್ನು ಆಳವಡಿಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಸಂಖ್ಯೆ 06582 ಮೈಸೂರು-ಹುಬ್ಬಳ್ಳಿ, ರೈಲು ಸಂಖ್ಯೆ 06535 ಮೈಸೂರು-ಸೊಲ್ಲಾಪುರ, ರೈಲು ಸಂಖ್ಯೆ 06227 ಮೈಸೂರು-ಶಿವಮೊಗ್ಗ, 06241 ಬೆಂಗಳೂರು-ಹುಬ್ಬಳ್ಳಿ ರೈಲಿಗೆ ಅಕ್ಟೋಬರ್ 13 ಮತ್ತು 14ರಂದು ಹೆಚ್ಚುವರಿ ಬೋಗಿ ಇರಲಿದೆ.

Rush Of Passengers During Dasara SWR Add Additional Coaches

ರೈಲು ಸಂಖ್ಯೆ 96581 ಹುಬ್ಬಳ್ಳಿ-ಮೈಸೂರು, ರೈಲು ಸಂಖ್ಯೆ 06242 ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಅಕ್ಟೋಬರ್ 17ರಂದು ಎರಡು ಹೆಚ್ಚುವರಿ ಬೋಗಿ ಜೋಡಿಸಲಾಗುತ್ತದೆ.

ಅಕ್ಟೋಬರ್ 13 ರಿಂದ 16ರ ತನಕ ರೈಲು ಸಂಖ್ಯೆ 06589 ಬೆಂಗಳೂರು-ಮೀರಜ್ ಮತ್ತು ರೈಲು ಸಂಖ್ಯೆ 06549 ಬೆಂಗಳೂರು-ಬೆಳಗಾವಿ ರೈಲಿಗೆ ಹೆಚ್ಚುವರಿ ಬೋಗಿ ಇರಲಿದೆ.

ಅಕ್ಟೋಬರ್ 14 ರಿಂದ 17ರ ತನಕ ರೈಲು ಸಂಖ್ಯೆ 02079 ಬೆಂಗಳೂರು-ಹುಬ್ಬಳ್ಳಿ ಮತ್ತು ರೈಲು ಸಂಖ್ಯೆ 02080 ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಅಕ್ಟೋಬರ್ 13 ರಿಂದ 17ರ ತನಕ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.ಮೈಸೂರು ದಸರಾ ಸಂದರ್ಭದಲ್ಲಿ ಬೆಂಗಳೂರು ನಗರದಿಂದ ಮೈಸೂರಿಗೆ ಹೆಚ್ಚಿನ ಜನರು ಪ್ರಯಾಣ ಮಾಡುತ್ತಾರೆ. ಜನರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ರೈಲುಗಳ ಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.

ರೈಲು ನಂಬರ್, ಯಾವ ನಿಲ್ದಾಣ, ತಲುಪುವ ನಿಲ್ದಾಣ, ಬೆಂಗಳೂರಿನಿಂದ ಹೊರಡುವ ಸಮಯ, ಮೈಸೂರು ತಲುಪುವ ಸಮಯ, ಸಂಚಾರ ನಡೆಸುವ ದಿನಗಳು ಮುಂತಾದ ಮಾಹಿತಿಯನ್ನು ಈ ಪಟ್ಟಿ ಒಳಗೊಂಡಿದೆ.

ಮೊದಲ ಬಾರಿ ಆಹಾರ ಉತ್ಪನ್ನ ಸಾಗಾಟ; ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯ ಮೊದಲ ಬಾರಿಗೆ ಬಳಕೆಯಾಗದ ಎಸಿ ಕೋಚ್‌ಗಳ ಮೂಲಕ ಚಾಕೊಲೇಟ್ ಮತ್ತು ಇತರ ಆಹಾರ ಉತ್ಪನ್ನಗಳನ್ನು ಗೋವಾದಿಂದ ದೆಹಲಿಗೆ ಸಾಗಾಟ ಮಾಡಿದೆ.

ಅಕ್ಟೋಬರ್ 8ರಂದು 163 ಟನ್ ಚಾಕೊಲೇಟ್, ನೂಡಲ್ಸ್‌ಗಳನ್ನು 12 ತೃತೀಯ ಎಸಿ ಮತ್ತು 6 ದ್ವಿತೀಯ ಎಸಿ ಕೋಚ್‌ಗಳಲ್ಲಿ ಸಾಗಣೆ ಮಾಡಲಾಗಿದೆ. ಗೋವಾದ ವಾಸ್ಕೋ ಡ-ಗಾಮ ನಿಲ್ದಾಣದಿಂದ ದೆಹಲಿಯ ಓಖ್ಲಾಗೆ ರೈಲು ಸಾಗಿದೆ.

ಈ ರೈಲು 2115 ಕಿ. ಮೀ. ಸಂಚಾರ ನಡೆಸಿ ಶನಿವಾರ ದೆಹಲಿ ತಲುಪಿದೆ. ಈ ಆಹಾರ ಸರಕು ಸಾಗಣೆಯಿಂದ ರೈಲ್ವೆಗೆ 12.83 ಲಕ್ಷ ಆದಾಯ ಬರಲಿದೆ. ಇಷ್ಟು ದಿನ ರಸ್ತೆ ಮಾರ್ಗದ ಮೂಲಕ ಈ ಸರಕು ಸಾಗಣೆಯಾಗುತ್ತಿತ್ತು.

ಹುಬ್ಬಳ್ಳಿ ವಿಭಾಗದ ವ್ಯವಹಾರ ಅಭಿವೃದ್ಧಿ ಘಟಕದ ಮಾರ್ಕೆಟಿಂಗ್ ಪ್ರಯತ್ನದ ಫಲವಾಗಿ ರೈಲ್ವೆ ಮೂಲಕ ಸಾಗಣೆಯಾಗಿದೆ. ಹುಬ್ಬಳ್ಳಿ ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

2020ರ ಅಕ್ಟೋಬರ್ 20ರ ಬಳಿಕ ಪ್ರತಿ ತಿಂಗಳು ಹುಬ್ಬಳ್ಳಿ ಪಾರ್ಸೆಲ್ ವಿಭಾಗದ ಆದಾಯವು 1 ಕೋಟಿ ರೂ. ಗಡಿ ದಾಟುತ್ತಿದೆ. 2021ರ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿ ಪಾರ್ಸೆಲ್ ವಿಭಾಗದ ಆದಾಯ 1.58 ಕೋಟಿ ಆಗಿದೆ.

ಈ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್ ತನಕ ಹುಬ್ಬಳ್ಳಿ ಪಾರ್ಸೆಲ್ ವಿಭಾಗ ಒಟ್ಟು 11.17 ಕೋಟಿ ರೂ. ಆದಾಯಗಳಿಸಿದೆ. ರೈಲಿನ ಮೂಲಕ ಸರಕು ಸಾಗಣೆ ಮಾಡುವುದು ಕೈಗಾರಿಕೆಗಳು ಮತ್ತು ವ್ಯಾಪಾರಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+