ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ 2023: ಅತಿಥಿಗಳಿಗೆಂದೇ ಸಿದ್ಧವಾದ ವಿಶೇಷ ನೋಂದಣಿ ಕಿಟ್‌ಗಳು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ, 09: ಉತ್ತರ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಹುಬ್ಬಳ್ಳಿಯಲ್ಲಿ ಜನವರಿ 12 ರಿಂದ 16 ರವರೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಹಿರಿಯ ಕಲಾವಿದರು ಭಾಗವಹಿಸುತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 7,500 ಸ್ಪರ್ಧಾಳುಗಳು ಮತ್ತು ಅತಿಥಿಗಳಿಗೆ ನೀಡಲು ವಿಶೇಷವಾದ ನೋಂದಣಿ ಕಿಟ್‍ಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಈ ಯುವ ಜನೋತ್ಸವವನ್ನು ಹಸಿರು ಯುವಜನೋತ್ಸವವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಹುಬ್ಬಳ್ಳಿಯಲ್ಲಿ ಯುವಜನೋತ್ಸವ 2023: ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಭರ್ಜರಿ ಸ್ವಾಗತಹುಬ್ಬಳ್ಳಿಯಲ್ಲಿ ಯುವಜನೋತ್ಸವ 2023: ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಭರ್ಜರಿ ಸ್ವಾಗತ

ಅತಿಥಿಗಳಿಗೆ ವಿಶೇಷ ಕಿಟ್‍ಗಳ ವ್ಯವಸ್ಥೆ

ನೋಂದಣಿ ಕಿಟ್‍ದಲ್ಲಿನ ವಸ್ತುಗಳು ಮರುಬಳಕೆಯ ವಸ್ತುಗಳಾಗಿವೆ. ನೋಂದಣಿ ಕಿಟ್‍ದಲ್ಲಿ ಐಡಿ ಕಾರ್ಡ್, ಮರುಬಳಕೆಯ ಸ್ಟೀಲ್ ವಾಟರ್ ಬಾಟಲ್, ಉತ್ತಮ ಗುಣಮಟ್ಟದ ಬ್ಯಾಗ್, ಸುಮಾರು 8ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳಿರುವ ಸಣ್ಣ ಕಿಟ್, ಯೋಗ ಮ್ಯಾಟ್, ಟ್ರ್ಯಾಕ್ ಸೂಟ್, ಯುವಜನೋತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ ಮತ್ತು ಅರವಿಂದೊ ಟ್ರಸ್ಟ್ ನೀಡಿರುವ ಯೂಥ್ ಆಫ್ ಇಂಡಿಯಾ ಪುಸ್ತಕ, ಮುಖ್ಯವಾಗಿ ಧಾರವಾಡವನ್ನು ನೆನಪಿಸುವ ಪೇಡಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇರುತ್ತದೆ.

 National Youth Festival in Hubballi 2023: Special registration kits ready for guests

ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆ

ಕರ್ನಾಟಕದ ಭವ್ಯ ಪರಂಪರೆಯನ್ನು ಮತ್ತು ಉತ್ತರ ಕರ್ನಾಟಕದ ವಿಶೇಷತೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾಡಳಿತವು ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಇದರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಡಾ.ಸಂತೋಷಕುಮಾರ ಬಿರಾದಾರ ನೇತೃತ್ವದ ಹುಡಾ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿರುವ ಸ್ವಾಗತ ಸಮಿತಿಯು ಕಳೆದ ಒಂದು ವಾರದಿಂದ ಶ್ರಮಿಸುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಹಾಗೂ ಗಿರೀಶ ಪದಕಿ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಯುವಜನೋತ್ಸವ ಸಹಾಯ ಕೇಂದ್ರ

ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರ ಜಿಲ್ಲೆ ಹಾಗೂ ಅಂತರಾಜ್ಯಗಳಿಂದ ಅತಿಥಿಗಳು ಆಗಮಿಸುವುದರಿಂದ ಅವರಿಗೆ ಸಾರಿಗೆ, ವಸತಿ, ನೋಂದಣಿ ಸ್ಥಳ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು. ಆದ್ದರಿಂದ ತಕ್ಷಣ ಸಹಾಯ ಮಾಡಲು ಅನುಕೂಲವಾಗುವಂತೆ ಸ್ವಾಗತ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದಿದೆ. ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್‍ ನಿಲ್ದಾಣ, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಮತ್ತು ಸಹಾಯ ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನು ಸಹ ನೇಮಿಸಲಾಗಿದೆ. ಸಹಾಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ದಿನದ 24 ಗಂಟೆಯೂ ಸಹಾಯ ಕೇಂದ್ರದಲ್ಲಿದ್ದು, ಬರುವ ಅತಿಥಿಗಳಿಗೆ ಅವರು ಸಹಾಯ ನೀಡಲಿದ್ದಾರೆ.

English summary
National Youth Festival 2023 in Hubballi: Special registration kits ready for youth festival contestants and guests, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X