ಹುಬ್ಬಳ್ಳಿ-ಧಾರವಾಡದಲ್ಲಿ ಹಾಸ್ಟೆಲ್ ಮತ್ತು ಮನೆಗೆ ಕನ್ನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 21: ಹು-ಧಾ ಅವಳಿ ನಗರದಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿವೆ. ಈಗ ಮತ್ತೆ ಮನೆಗೆ ಹಾಗೂ ಹಾಸ್ಟೆಲ್ ಗೆ ಖದೀಮರು ಕನ್ನ ಹಾಕಿರುವ ಪ್ರಕರಣ ದಾಖಲಾಗಿದೆ.

ನಗರದ ಗೋಕುಲ ರಸ್ತೆಯಲ್ಲಿರುವ ರವಿನಗರದಲ್ಲಿ ಭೀಮರಾವ್ ಕುಲಕರ್ಣಿ ಎನ್ನುವರ ಮನೆಗೆ ಕನ್ನ ಹಾಕಿದ್ದಾರೆ. ಮನೆ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದ ವೆಂಕಟೇಶ್ವರ ಭೀಮರಾವ್ ಕುಲಕರ್ಣಿ ಎನ್ನುವರ ಮನೆ ಕಿಟಕಿಯ ಗ್ರಿಲ್ ಮುರಿದು ಮನೆಗಳ್ಳತನ ಮಾಡಿದ್ದಾರೆ.

House and hostel robbery in hubballi

ಮನೆಯಲ್ಲಿದ್ದ 75 ಸಾವಿರ ರೂ.ಮೌಲ್ಯದ ಬಂಗಾರ ಮತ್ತು ಇತರೆ ಸಾಮಗ್ರಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರವಾಡದಲ್ಲಿ : ಧಾರವಾಡ ಬೆಳಗಾವಿ ರಸ್ತೆಯಲ್ಲಿರುವ ಅಗ್ರಿ ಕಾಲೇಜ್ ಆವರಣದಲ್ಲಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಗಳ 6 ರೂಮ್ ಗಳ ಮೇಲ್ಛಾವಣಿ ಮೂಲಕ ಒಳನುಗ್ಗಿದ ದರೋಡೆ ಕೋರರು 45,220 ಮೌಲ್ಯದ 2 ಲ್ಯಾಪ್ ಟಾಪ್, 7 ಮೊಬೈಲ್ ಕಳ್ಳತನ ಮಾಡಿದ್ದಾರೆ.

ಈ ಕುರಿತು ಸೀಂಧನೂರಿನ ಅಮರಚಂದ್ರಶೇಖರ ಹಾಗೂ ಚನ್ನಪ್ಪ ವಂದಾಲಿ ಎಂಬುವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಂಡ :ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಅಡಿ 642 ಕೇಸಗಳನ್ನು ದಾಖಲಿಸಿದ್ದು ಒಟ್ಟು 161300 ರೂ ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi-Dharwad one more house and hostel robbery incident on November 20. Total worth of 75 thousand rupees cash and two laptops,7 mobile phones in hostel has stolen.
Please Wait while comments are loading...