ಹಿರೇಕೆರೂರು ಉಪ ಚುನಾವಣೆ: ಗೆಲುವಿನ ಕೇಕೆ ಹಾಕಿದ ಕೌರವ..!
Recommended Video
ಹಾವೇರಿ, ಡಿಸೆಂಬರ್ 09: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ಪ್ರತಿ ಮತ ಎಣಿಕೆ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ.
ಡಿಸೆಂಬರ್ 05 ರಂದು ನಡೆದ ಉಪ ಚುನಾವಣೆಗೆ ಇಂದು ಫಲಿತಾಂಶ ಪ್ರಕಟವಾಗುವ ದಿನ. ಈಗಾಗಲೇ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಹಿರೇಕೆರೂರಿನ ಮತ ಎಣಿಕೆ ಪ್ರಕ್ರಿಯೆ 17 ಸುತ್ತುಗಳಲ್ಲಿ ನಡೆಯಲಿದೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಮತ್ತು ಸಿದ್ದರಾಮಯ್ಯನವರ ವಿರುದ್ದ ಭಾರೀ ವಾಗ್ದಾಳಿ ನಡೆಸಿದ್ದ ಬಿ.ಸಿ.ಪಾಟೀಲ್ ಅವರಿಗೆ ಈ ಉಪ ಚುನಾವಣೆಯ ಫಲಿತಾಂಶ ಅತ್ಯಂತ ಪ್ರಮುಖವೆನಿಸಿದೆ. ಬಿಜೆಪಿಯಿಂದ ಬಿ.ಸಿ.ಪಾಟೀಲ್, ಕಾಂಗ್ರೆಸ್ ನಿಂದ ಬಿ.ಹೆಚ್.ಬನ್ನಿಕೊಡ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಗೆಲುವಿನ ಸನಿಹದತ್ತ ಬಿ.ಸಿ.ಪಾಟೀಲ್ ಮುನ್ನುಗ್ಗುತ್ತಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಹಿರೇಕೆರೂರಿನ 9ನೇ ಮತ ಎಣಿಕೆ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿಯ ಅಭ್ಯರ್ಥಿ 47,265, ಕಾಂಗ್ರೆಸ್ ಅಭ್ಯರ್ಥಿ 30,083 ಮತಗಳನ್ನು ಪಡೆದಿದ್ದಾರೆ. 17,182 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications