ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಓಮಿಕ್ರಾನ್ ಸೋಂಕಿತನಿಂದ ಇಬ್ಬರಿಗೆ ಸೋಂಕು

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 10: ಗುಜರಾತ್‌ನಲ್ಲಿ ಓಮಿಕ್ರಾನ್ ಸೋಂಕಿತನಿಂದ ಮತ್ತಿಬ್ಬರಿಗೆ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ.

ಗುಜರಾತ್‌ನಲ್ಲಿ ವಾರದ ಹಿಂದೆ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಎನ್‌ಆರ್‌ಐ ವ್ಯಕ್ತಿಯ ಪತ್ನಿ ಮತ್ತು ಸಂಬಂಧಿಯೊಬ್ಬರಿಗೆ ಕೋವಿಡ್-19 ಹೊಸ ರೂಪಾಂತರಿ ದೃಢಪಟ್ಟಿದೆ ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು(ಜೆಎಂಸಿ) ಶುಕ್ರವಾರ ತಿಳಿಸಿದ್ದಾರೆ.

ಓಮಿಕ್ರಾನ್ ಲಕ್ಷಣಗಳು ಮೊದಲಿನ 3 ಅಲೆಗಳಿಗಿಂತ ಸೌಮ್ಯವಾಗಿರಲಿವೆ: ತಜ್ಞರುಓಮಿಕ್ರಾನ್ ಲಕ್ಷಣಗಳು ಮೊದಲಿನ 3 ಅಲೆಗಳಿಗಿಂತ ಸೌಮ್ಯವಾಗಿರಲಿವೆ: ತಜ್ಞರು

ಇದರೊಂದಿಗೆ, ಗುಜರಾತ್‌ನಲ್ಲಿ ಓಮಿಕ್ರಾನ್‌ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಮತ್ತು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಸೋಂಕಿತರನ್ನು ನಗರದ ಸರ್ಕಾರಿ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಶೇಷ ಓಮಿಕ್ರಾನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜೆಎಂಸಿ ಪ್ರಕಟಣೆ ತಿಳಿಸಿದೆ.

In Gujarat Infected Mans Wife, Brother-In-Law Also Detected With Omicron Variant In Gujarat

ಡಿಸೆಂಬರ್ 4 ರಂದು ಜಿಂಬಾಬ್ವೆಯಿಂದ ಜಾಮ್ ನಗರಕ್ಕೆ ಆಗಮಿಸಿದ 72 ವರ್ಷದ ಎನ್‌ಆರ್‌ಐ ಓಮಿಕ್ರಾನ್ ಪಾಸಿಟಿವ್ ಬಂದಿತ್ತು. ಈಗ ಅವರ ಪತ್ನಿ ಮತ್ತು ಸಂಬಂಧಿಗೂ ಪಾಸಿಟಿವ್ ಬಂದಿದೆ.

ಗಾಂಧಿನಗರದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್(ಜಿಬಿಆರ್‌ಸಿ) ನಲ್ಲಿ ಸ್ವ್ಯಾಬ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಒಳಪಡಿಸಲಾಗಿದ್ದು, ಇಬ್ಬರಿಗೂ ಓಮಿಕ್ರಾನ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಮಿಕ್ರಾನ್ ರೂಪಾಂತರದ 3 ಪ್ರಮುಖ ಗುಣಲಕ್ಷಣಗಳಾಗಿವೆ: ವರದಿಯ ಪ್ರಕಾರ, ಓಮಿಕ್ರಾನ್ ರೂಪಾಂತರದ ರೋಗಲಕ್ಷಣಗಳು ಹಿಂದಿನ ತಳಿಗಳಿಗಿಂತ ಭಿನ್ನವಾಗಿರಬಹುದು ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಅಭಿಪ್ರಾಯಪಟ್ಟಿದ್ದಾರೆ.

ಓಮಿಕ್ರಾನ್‌ನ ಮುಖ್ಯ ಲಕ್ಷಣಗಳ ಬಗ್ಗೆ ಮಾತನಾಡಿರುವ ಏಂಜೆಲಿಕ್ ಕೊಯೆಟ್ಜಿ, ರೋಗಿಗಳಲ್ಲಿ ಹೆಚ್ಚು ಆಯಾಸ, ಮೈ ಕೈ ನೋವು ಮತ್ತು ತಲೆನೋವು ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಕೆಲವು ರೋಗಿಗಳಲ್ಲಿ ದೌರ್ಬಲ್ಯದ ಲಕ್ಷಣಗಳು ಕೂಡಾ ವರದಿಯಾಗಿವೆ. ಇಲ್ಲಿಯವರೆಗೆ ಯಾವುದೇ ರೋಗಿಗಿಯಲ್ಲಿ ವಾಸನೆಯ ನಷ್ಟ ಅಥವಾ ನಾಲಗೆ ರುಚಿ ನಷ್ಟ ತೀವ್ರ ಜ್ವರದಂತಹ ಸಮಸ್ಯೆ ಕೇಳಿ ಬಂದಿಲ್ಲ.

ಕೊರೊನಾ ಲಸಿಕೆಯು ಓಮಿಕ್ರಾನ್ ರೂಪಾಂತರದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರುತ್ತಿದೆ ಎಂದು ವೈದ್ಯ ಏಂಜೆಲಿಕ್ ಕೊಯೆಟ್ಜಿ ಹೇಳಿದ್ದಾರೆ. ಏಕೆಂದರೆ ಲಸಿಕೆ ಹಾಕಿದ ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ.

ಓಮಿಕ್ರಾನ್ ರೂಪಾಂತರವು ಪ್ರಾಥಮಿಕ ಆರೋಗ್ಯ ರಕ್ಷಣೆಯ ಹಂತದಲ್ಲಿ ಡೆಲ್ಟಾ ರೂಪಾಂತರಕ್ಕಿಂತ ಕಡಿಮೆಯಾಗಿದೆ. ಆದರೆ ಆಸ್ಪತ್ರೆಯ ಮಟ್ಟದಲ್ಲಿ ಈ ಚಿತ್ರಣ ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ಇದು ಹೊಸ ರೂಪಾಂತರದ ಆರಂಭಿಕ ದಿನಗಳಾಗಿವೆ ಮತ್ತು ಹೆಚ್ಚಿನ ಜನರು ಆಸ್ಪತ್ರೆಗಳಿಗೆ ದಾಖಲಾಗಿಲ್ಲ.

ಓಮಿಕ್ರಾನ್ ಲಕ್ಷಣಗಳು ಮೊದಲ ಮೂರು ಅಲೆಗಳಿಗಿಂತ ಸೌಮ್ಯವಾಗಿರಲಿವೆ ಎಂದು ದಕ್ಷಿಣ ಆಫ್ರಿಕಾದ ತಜ್ಞರು ಮಾಹಿತಿ ನೀಡಿದ್ದಾರೆ. ಗೌಟೆಂಗ್ ಪ್ರಾಂತ್ಯದಲ್ಲಿ ಪ್ರಸ್ತುತ ನಾಲ್ಕನೇ ಅಲೆ ಶುರುವಾಗಿದೆ.

ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಲ್ಲಿ ಕಂಡುಬಂದಿರುವ ರೋಗ ಲಕ್ಷಣಗಳು ಕಳೆದ ಮೂರು ಅಲೆಗಳಿಗಿಂತ ಸೌಮ್ಯವಾಗಿವೆ ಎಂಬುದು ತಿಳಿದುಬಂದಿದೆ.

ಹೆಚ್ಚಿನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಅಥವಾ ತೀವ್ರ ನಿಗಾ ಘಟಕದ ಅಗತ್ಯವಿಲ್ಲ ಓಮಿಕ್ರಾನ್ ಕುರಿತು ಮಾಹಿತಿ ಪಡೆಯಲು ವಿಜ್ಞಾನಿಗಳು ಇನ್ನೂ ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

ಮೊದಲ ಮೂರು ಅಲೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ದಾಖಲಾತಿ ದರವು ಏರುಗತಿಯಲ್ಲಿತ್ತು, ಪ್ರಸ್ತುತ ನೆಟ್‌ ಕೇರ್ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ ಸುಮಾರು ಶೇ. 90ರಷ್ಟು ಕೋವಿಡ್ ರೋಗಿಗಳಿಗೆ ಕೃತಕ ಆಮ್ಲಜನಕದ ಅಗತ್ಯವಿಲ್ಲ. ಒಟ್ಟು 337 ಕೊರೊನಾ ಸೋಂಕಿತರಲ್ಲಿ ಎಂಟು ಮಂದಿಯನ್ನು ಮಾತ್ರ ವೆಂಟಿಲೇಟರ್‌ನಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
The wife and brother-in-law of an NRI man, who had been found infected with the Omicron variant of COVID-19 here in Gujarat a week back, were also detected with the new strain, officials of the Jamnagar Municipal Corporation (JMC) said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X