Get Updates
Get notified of breaking news, exclusive insights, and must-see stories!

ಜನವರಿ 3 ರವರೆಗೆ ವಿದೇಶಗಳಿಂದ ಬಂದ 11 ಮಂದಿಯಲ್ಲಿ ಓಮಿಕ್ರಾನ್ ಉಪತಳಿ ಪತ್ತೆ

ನವದೆಹಲಿ, ಜ. 05: ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ವಿದೇಶಗಳಿಂದ ಬಂದ ಹನ್ನೊಂದು ಮಂದಿಯಲ್ಲಿ ಓಮಿಕ್ರಾನ್ ಉಪ ತಳಿ ಕಂಡು ಬಂದಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಕೊರೊನಾ ಸೋಂಕಿಗೆ ಒಳಗಾಗಿರುವ 124 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಹನ್ನೊಂದು ಮಂದಿಯಲ್ಲಿ ಓಮಿಕ್ರಾಮ್ ರೂಪಾಂತರಗಳು ಕಂಡು ಬಂದಿವೆ. ಈ ಸೋಂಕು ಭಾರತದಲ್ಲಿ ಈ ಹಿಂದೆಯೇ ವರದಿಯಾಗಿದೆ.

ಈ ಅವಧಿಯಲ್ಲಿ 19,227 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು ಮತ್ತು ಭೂಭಾಗಗಲ್ಲಿ ಪರೀಕ್ಷಿಸಲಾಗಿದೆ. ಅವರಲ್ಲಿ 124 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಸೋಂಕಿಗೆ ಒಳಗಾಗಿರುವವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಸಿದೆ.

11 Omicron sub-variants found among the 124 international travellers

124 ಕೋವಿಡ್ ಪಾಸಿಟಿವ್ ಮಾದರಿಗಳಲ್ಲಿ 40 ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲಿ 14 ಮಾದರಿಗಳಲ್ಲಿ XBB ಮತ್ತು ಒಂದು ಮಾದರಿಯಲ್ಲಿ BF 7.4.1 ಉಪತಳಿಗಳು ಕಂಡುಬಂದಿದೆ.

ಇನ್ನು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ದೇಶದ ಜನರು ಅನಗತ್ಯವಾಗಿ ಭಯಭೀತರಾಗಬೇಡಿ. ಆದರೆ ಜಾಗರೂಕರಾಗಿರಿ, ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಿ ಮತ್ತು ಕೋವಿಡ್‌ಗೆ ಸಂಬಂಧಿಸಿದ ತಪ್ಪುದಾರಿಗೆಳೆಯುವ ವರದಿಗಳಿಂದ ದೂರವಿರಿ ಎಂದು ಮನವಿ ಮಾಡಿದ್ದಾರೆ.

ಡಿಸೆಂಬರ್ 24 ರಿಂದ, ಪ್ರತಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಬರುವ ಪ್ರಯಾಣಿಕರಲ್ಲಿ ಶೇಕಡಾ ಎರಡರಷ್ಟು ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಗಳನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಇದಲ್ಲದೆ, ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಜನವರಿ 1 ರಿಂದ ಕೋವಿಡ್ ನೆಗೆಟಿವ್ ವರದಿಗಳನ್ನು ನೀಡುವುದನ್ನು ಕಡ್ಡಾಯವಾಗಿದೆ.

ಭಾರತಕ್ಕೆ ಪ್ರಯಾಣವನ್ನು ಕೈಗೊಳ್ಳುವ 72 ಗಂಟೆಗಳ ಮೊದಲು ಪರೀಕ್ಷೆಯನ್ನು ನಡೆಸಬೇಕು. ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ನಿರ್ಗಮನದ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಆದೇಶಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+