ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ: ವಾರಕ್ಕೆ 65 ಮಿಲಿಯನ್ ಪ್ರಕರಣ ಸಾಧ್ಯತೆ!
ಬೀಜಿಂಗ್, ಮೇ. 26: ಚೀನಾವು ಕೊರೊನಾ ವೈರಸ್ ಪ್ರಕರಣಗಳ ಬೃಹತ್ ಅಲೆಯನ್ನು ಎದುರಿಸುತ್ತಿದೆ ಎಂದು ಹಿರಿಯ ಆರೋಗ್ಯ ಸಲಹೆಗಾರರನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸಾಂಕ್ರಾಮಿಕ ರೋಗದ ಹೊಸ ಅಲೆಯು ಜೂನ್ ಅಂತ್ಯದ ವೇಳೆಗೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ. ದೇಶವು ವಾರಕ್ಕೆ ಸುಮಾರು 65 ಮಿಲಿಯನ್ ಸೋಂಕುಗಳನ್ನು ವರದಿ ಮಾಡುತ್ತದೆ ಎನ್ನಲಾಗಿದೆ.
ಏಪ್ರಿಲ್‌ನಿಂದ ಒಮಿಕ್ರಾನ್ ರೂಪಾಂತರ ಎಕ್ಸ್‌ಬಿಬಿಯ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಚೀನಾ ಸಾಕ್ಷಿಯಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ, ದೇಶವು ಒಂದು ವಾರದಲ್ಲಿ 40 ಮಿಲಿಯನ್ ಸೋಂಕುಗಳನ್ನು ವರದಿ ಮಾಡುವ ಸಾಧ್ಯತೆಯಿದೆ. ಜೂನ್ ಅಂತ್ಯದ ವೇಳೆಗೆ ವಾರಕ್ಕೆ 65 ಮಿಲಿಯನ್‌ಗೆ ತಲುಪುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣದ ನಗರವಾದ ಗುವಾಂಗ್‌ಝೌನಲ್ಲಿ ನಡೆದ ಜೈವಿಕ ತಂತ್ರಜ್ಞಾನ ಸಮ್ಮೇಳನದಲ್ಲಿ ಉಸಿರಾಟದ ಕಾಯಿಲೆಯ ತಜ್ಞ ಝಾಂಗ್ ನನ್ಶನ್ ಅವರ ಪ್ರಸ್ತುತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್ 2022 ರಲ್ಲಿ ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ರದ್ದುಗೊಳಿಸಿದ ನಂತರ ಹೊಸ ಸೋಂಕಿನ ಅತಿದೊಡ್ಡ ಅಲೆ ಆರಂಭವಾಗುತ್ತಿದೆ ಎಂದು ಹೇಳಲಾಗಿದೆ.
ಹಿಂದಿನ ಅಲೆಯಲ್ಲಿ, ಚೀನಾ ಒಂದು ದಿನದಲ್ಲಿ 37 ಮಿಲಿಯನ್ ಕೊರೋನ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ಇದುವರೆಗಿನ ಅತಿದೊಡ್ಡ ಏಕದಿನ ಸಕ್ರಿಯ ಪ್ರಕರಣಳ ದಾಖಲಾತಿಯಾಗಿದೆ. ಸೋಂಕುಗಳ ಭಾರೀ ಉಲ್ಬಣವು ಚೀನಾದಲ್ಲಿ ಜನರನ್ನು ದಿನನಿತ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಪರದಾಡುವಂತೆ ಮಾಡಿದೆ. ದೇಶದಲ್ಲಿನ ಆರೋಗ್ಯ ವ್ಯವಸ್ಥೆಯು ತೀವ್ರ ಒತ್ತಡಕ್ಕೆ ಒಳಗಾಗಿತ್ತು. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕಿದವು ಮತ್ತು ಔಷಧದ ಕೊರತೆಯು ರಾಷ್ಟ್ರವನ್ನು ತೀವ್ರವಾಗಿ ಕಾಡಿತ್ತು.

ಎಕ್ಸ್‌ಬಿಬಿ ಓಮಿಕ್ರಾನ್‌ನ ಬಿಎ.2.75 ಮತ್ತು ಬಿಜೆ.1 ಉಪ-ರೂಪಾಂತರಗಳ ಹೈಬ್ರಿಡ್ ಆಗಿದೆ. ಎಕ್ಸ್‌ಬಿಬಿ ಸ್ಪೈಕ್ ಪ್ರೋಟೀನ್‌ನಲ್ಲಿ ಏಳು ರೂಪಾಂತರಗಳನ್ನು ಹೊಂದಿದೆ. ಪ್ರತಿರಕ್ಷಣಾ ವ್ಯವಸ್ಥೆಯು ಎಕ್ಸ್‌ಬಿಬಿ ಅನ್ನು ಗುರುತಿಸಲು ಸಮಯ ತೆಗೆದುಕೊಳ್ಳುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಸೋಂಕನ್ನು ಉಂಟುಮಾಡಲು ನಮ್ಮ ದೇಹದ ಜೀವಕೋಶಗಳನ್ನು ಸುಲಭವಾಗಿ ಪ್ರವೇಶಿಸುತ್ತದೆ.
ಚೀನಾದಲ್ಲಿ ಕೋವಿಡ್ ಸೋಂಕುಗಳಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಹೊಸ ಅಲೆಯ ಪ್ರಕರಣಗಳ ವಿರುದ್ಧ ಹೋರಾಡಲು ರಾಷ್ಟ್ರವು ತಯಾರಿಯಲ್ಲಿದೆ. ಚೀನಾ ಹೊಸ ಕೋವಿಡ್ ಲಸಿಕೆಗಳನ್ನು ಹೊಂದಿದೆ, ಇದು ಎಕ್ಸ್‌ಬಿಬಿಯ ರೂಪಾಂತರಗಳನ್ನು ಕೊಲ್ಲುವ ಕೆಲಸ ಮಾಡುತ್ತದೆ. ದೇಶದ ಔಷಧ ನಿಯಂತ್ರಕವು ಈ ಔಷಧಿ ಮಾರಲು ಪ್ರಾಥಮಿಕ ಅನುಮೋದನೆಯನ್ನು ನೀಡಿದೆ.
ಇತ್ತೀಚೆಗೆ ಕೋವಿಡ್ -19 ಇನ್ನು ಮುಂದೆ ಜಾಗತಿಕ ತುರ್ತುಸ್ಥಿತಿಯಾಗಿ ಅರ್ಹತೆ ಪಡೆಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯನ್ನು ಗಮನಿಸಿ ತುರ್ತು ಹಂತ ಮುಗಿದಿದ್ದರೂ ಸಹ, ಸಾಂಕ್ರಾಮಿಕ ರೋಗವು ಕೊನೆಗೊಂಡಿಲ್ಲ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications