25 ಬಾರಿ ಹಲವು ಪುರುಷರೊಂದಿಗೆ ಓಡಿ ಹೋದರೂ, ಪತಿಗೆ ಮಾತ್ರ ಆಕೆಯೇ ಬೇಕು

ಗುವಾಹಾಟಿ, ಸೆಪ್ಟೆಂಬರ್ 10: ಗಂಡ- ಹೆಂಡತಿ ನಡುವಿನ ಸಂಸಾರದಲ್ಲಿ ಒಮ್ಮೆ ಅನುಮಾನ ಮೂಡಿದರೆ ಸಾಕು ಜೀವನ ಪರ್ಯಂತ ಅನುಮಾನದ ಭೂತವೇ ಆವರಿಸಿರುತ್ತದೆ.

ಒಬ್ಬ ಮಹಿಳೆ ಪರ ಪುರುಷನೊಂದಿಗೆ ಮಾತನಾಡುವುದನ್ನು ಕೇಳಿ, ನೋಡಿಯೇ ಈ ದೇಶದಲ್ಲಿ ವಿಚ್ಛೇದನ ಹಂತದವರೆಗೂ ಹೋಗಿರುವುದನ್ನು ನಾವೆಲ್ಲ ನೋಡಿದ್ದೇವೆ. ಸಂಸಾರ ಸುಂದರವಾಗಿ ನಡೆಯಬೇಕೆಂದರೆ ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಎಂಬುದು ಬಹುಮುಖ್ಯವಾಗಿರುತ್ತದೆ.

ಒಬ್ಬರ ಜೊತೆ ಮಹಿಳೆ ಸಂಬಂಧ ಹೊಂದಿದ್ದರೆ ಗಂಡ ಮತ್ತೆ ಅವಳನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟ. ಒಪ್ಪಿಕೊಂಡರೂ ಸಂಸಾರ ಸುಖವಾಗಿರುತ್ತದೆ ಅಂತ ಹೇಳುವುದು ಇನ್ನೂ ಕಷ್ಟವಾಗಿರುತ್ತೆ. ಆದರೆ ಅಸ್ಸಾಂನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿವಿದ್ದರೂ, ಆಕೆಯ ಗಂಡ ಮಾತ್ರ ಅವಳೇ ಬೇಕು ಎನ್ನುತ್ತಾನೆ.

Assam Woman Elopes 25 Times With Different Men In 10 Years, Husband Still Willing To Accept Her

ನಿಜ, 40 ವರ್ಷದ ಮಹಿಳೆಯೊಬ್ಬಳು ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ಧಿಂಗ್ ಲಹ್ಕರ್ ಗ್ರಾಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಜುದ್ದೀನ್‍ರನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಹೀಗಿದ್ದರೂ ಪತಿ ಮತ್ತು ಅತ್ತೆ ಮಾತ್ರ ಯಾವುದೇ ದೂರು ನೀಡದೆ, ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ.

ಅಲ್ಲದೇ ಈ ಮಹಿಳೆಗೆ 3 ವರ್ಷ ಹಾಗೂ 3 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, 6 ವರ್ಷದ ಓರ್ವ ಮಗಳಿದ್ದಾಳೆ. ಈ ಬಗ್ಗೆ ಆಕೆಯ ನೆರೆಮನೆಯವರು, ಯುವಕನೊಂದಿಗೆ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೇ ಅನೇಕ ಬಾರಿ ಪ್ರೀತಿ ಮಾಡಿ ಓಡಿ ಹೋಗಿದ್ದಳು. ಆದರೆ ಕೆಲವು ತಿಂಗಳ ಬಳಿಕ ಅತ್ತೆ ಮನೆಗೆ ಮರಳಿದ್ದಳು ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಮಹಿಳೆಯ ಪತಿ ಮಾಫಿಜುದ್ದೀನ್, "ನನ್ನ ಹೆಂಡತಿ ವಾಪಸ್ ಬಂದ ಬಳಿಕ ಮತ್ತೊಮ್ಮೆ ಓಡಿ ಹೋಗುವುದಿಲ್ಲ ಎಂದು ಮಾತು ನೀಡಿದ್ದಳು. ಆದರೆ ಆ ಮಾತನ್ನು ಈಗ ಉಳಿಸಿಕೊಂಡಿಲ್ಲ. ಕೆಲವು ಬಾರಿ ನನ್ನ ಹೆಂಡತಿ ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳುತ್ತಿದ್ದಳು. ಮತ್ತೆ ಕೆಲವು ಬಾರಿ ತನ್ನ ಸಂಬಂಧಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ಹೋಗಿದ್ದೆ ಎನ್ನುತ್ತಿದ್ದಳು. ನಮಗೆ ಮೂವರು ಮಕ್ಕಳಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನಾವು ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಳ್ಳುತ್ತಿದ್ದೇವೆ," ಎಂದಿದ್ದಾರೆ.

"ಶನಿವಾರ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ, ನೆರೆ ಮನೆಯವರ ಬಳಿ ನನ್ನ ಮೂರು ತಿಂಗಳ ಮಗುವನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂದು ನನ್ನ ತಂದೆ ತಿಳಿಸಿದರು. ಅಲ್ಲದೇ ನೆರೆಮನೆಯವರು, ಆಡುಗಳಿಗೆ ಮೇವು ತರಲು ಹೋಗಿಬರುವುದಾಗಿ ಹೇಳಿ ಹೊರಟಿದ್ದಳು," ಎಂದು ತಿಳಿಸಿದ್ದಾರೆ.

"ಇದೀಗ ಮತ್ತೆ ತಮ್ಮ ಹೆಂಡತಿ ಯಾವಾಗ ಮನೆಗೆ ಹಿಂದಿರುಗುತ್ತಾಳೆ ಅಂತ ಗೊತ್ತಿಲ್ಲ. ಅಲ್ಲದೇ ಮನೆಯಲ್ಲಿದ್ದ 22,000 ರೂ. ಹಣ ಮತ್ತು ಕೆಲವು ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ. ಆದರೆ ಯಾರ ಜೊತೆಗೆ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಇಲ್ಲ."

"ಇದು ಅವಳು ಓಡಿ ಹೋಗುತ್ತಿರುವುದು 25ನೇ ಬಾರಿ. ಆದರೂ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಅವಳನ್ನು ಮತ್ತೆ ಒಪ್ಪಿಕೊಳ್ಳುತ್ತೇನೆ. ನಮಗೆ ಇನ್ನೂ ಸಣ್ಣಸಣ್ಣ ಮಕ್ಕಳಿದ್ದಾರೆ. ನಾನು ಅವಳನ್ನು ಒಪ್ಪಿಕೊಳ್ಳದಿದ್ದರೆ, ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಕಾನೂನು ಮತ್ತು ಇತರೆ ಸಮಸ್ಯೆಗಳು ಆಗಬಾರದೆಂದು ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ," ಎಂದು ಪತಿ ಮಾಫಿಜುದ್ದೀನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+