96 ಗಂಟೆಗಳಲ್ಲಿ ರಾಜ್ಯಕ್ಕೆ ಹಿಂದಿರುಗುವವರಿಗೆ ಕ್ವಾರಂಟೈನ್ ಇಲ್ಲ: ಅಸ್ಸಾಂ

ದಿಸ್ಪುರ್, ಸೆಪ್ಟೆಂಬರ್ 11: ಬೇರೆ ರಾಜ್ಯಗಳಿಗೆ ಹೋಗಿ 96 ಗಂಟೆಯೊಳಗೆ ವಾಪಸ್ ಆಗುವವರಿಗೆ ಕ್ವಾರಂಟೈನ್ ಇಲ್ಲ ಎಂದು ಅಸ್ಸಾಂ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರವು ಹಂತ ಹಂತವಾಗಿ ಲಾಕ್‌ಡೌನ್ ನಿಯಮ ಸಡಿಲಗೊಳಿಸುತ್ತಿದೆ. ಇದರ ಭಾಗವಾಗಿ ಅಸ್ಸಾಂ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಅಸ್ಸಾಂನಿಂದ ಬೇರೆ ಯಾವುದೇ ರಾಜ್ಯಕ್ಕೆ ತೆರಳುವ ವ್ಯಕ್ತಿಯು ತಾನು ರಾಜ್ಯದಿಂದ ಹೊರನಡೆದ ಸಮಯದಿಂದ 96 ಗಂಟೆಯೊಳಗಾಗಿ ವಾಪಸಾದರೆ ಅಂತವರು ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದೆ.

Assam Government Says No Quarantine For Those Who Leave State And Return Within 96 Hours

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಒಟ್ಟು 29,690 ಸಕ್ರಿಯ ಪ್ರಕರಣಗಳಿವೆ. 1,05,701 ಸೋಂಕಿತರು ಗುಣಮುಖರಾಗಿದ್ದು,414 ಮಂದಿ ಮೃತಪಟ್ಟಿದ್ದಾರೆ.

ವಾಪಸ್ ಆದ ಬಳಿಕ ವ್ಯಕ್ತಿಯು ರಾಪಿಡ್ ಆಂಟಿಜನ್ ಟೆಸ್ಟ್‌ಗೆ ಒಳಗಾಗಬೇಕು. ಪರೀಕ್ಷೆ ವರದಿ ಪಾಸಿಟಿವ್ ಬಂದರೆ, ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿರಬೇಕು, ಕೊವಿಡ್ 19 ಮಾರ್ಗಸೂಚಿಯಂತೆ ಚಿಕಿತ್ಸೆ ಪಡೆಯಬೇಕು.

ಒಂದೊಮ್ಮೆ ಪರೀಕ್ಷೆ ನೆಗೆಟಿವ್ ಬಂದರೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಅದರ ವರದಿ ಬರುವವರೆಗೆ ಪ್ರತ್ಯೇಕ ವಾಸದಲ್ಲಿರಬೇಕು. ಅದರಲ್ಲಿಯೂ ನೆಗೆಟಿವ್ ಬಂದರೆ ಕ್ವಾರಂಟೈನ್ ಮಾಡುವ ಅಗತ್ಯವಿರುವುದಿಲ್ಲ.

Recommended Video

      Zameer Ahmed ಗರಂ Sambargi ವಿರುದ್ಧ ಬಿತ್ತು ಸಿಕಾಪಟ್ಟೆ ಸೆಕ್ಷನ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+