ರೋಗಿ ಸತ್ತನೆಂದು ವೈದ್ಯರನ್ನೇ ಹೊಡೆದು ಕೊಂದರು

ಗುವಾಹಟಿ, ಸೆಪ್ಟೆಂಬರ್ 1: ರೋಗಿ ಸತ್ತನೆನ್ನುವ ಕೋಪಕ್ಕೆ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಸೇರಿ ವೈದ್ಯರನ್ನೇ ಕೊಲೆ ಮಾಡಿರುವ ಘಟನೆ ಅಸ್ಸಾಂನಲ್ಲಿ ಶನಿವಾರ ಸಂಜೆ ನಡೆದಿದೆ.

ಅಸ್ಸಾಮಿನ ಜೋರ್ಹಟ್ ಜಿಲ್ಲೆಯಲ್ಲಿ 73 ವರ್ಷದ ವೈದ್ಯ ಡಿಬೆನ್ ದತ್ತಾ ಅವರನ್ನು ಕೊಲೆ ಮಾಡಲಾಗಿದೆ. ಎಸ್ಟೇಟಿನ ಆಸ್ಪತ್ರೆಯಲ್ಲಿ ಸೋಮ್ರಾ ಮಾಜಿ ಎನ್ನುವವರು ಚಿಕಿತ್ಸೆ ಪಡೆದುಕೊಂಡಿದ್ದರು.

ಅಂದು ದತ್ತಾ ಅವರು ಆಸ್ಪತ್ರೆಗೆ ಬಾರದೆ ರೋಗಿ ತೀರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಅವರು ಆಸ್ಪತ್ರೆಗೆ ಬಂದ ಬಳಿಕ ರೂಮೊಂದರಲ್ಲಿ ಅವರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.

Assam Doctor Died After Beaten Up By Tea Garden Workers

ಟೀ ಎಸ್ಟೇಟ್‌ನ ಸಂರಕ್ಷಣಾ ಅಧಿಕಾರಿಯು ವೈದ್ಯರನ್ನು ಕಾಪಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ಟೀ ಎಸ್ಟೇಟ್ ಮೇಲೆ ಒಂದಷ್ಟು ಜನರು ಕಲ್ಲು ಎಸೆಯಲು ಆರಂಭಿಸಿದರು.

ಆಗ ಸಿಆರ್‌ಪಿಎಫ್ ಸಿಬ್ಬಂದಿಗಳು ಗಲಾಟೆಯನ್ನು ಹತೋಟಿಗೆ ತಂದರು. ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+