ರಾಹುಲ್‌ ಗಾಂಧಿ ಜೊತೆ ಸಿದ್ದರಾಮಯ್ಯ ಕ್ಷೇತ್ರ ಹುಡುಕುವ ಯಾತ್ರೆ ಮಾಡುತ್ತಿದ್ದಾರೆ: ಕಟೀಲ್‌

ಗದಗ. ಅ.12: ಬಿಜೆಪಿ ಜನ ಸಂಕಲ್ಪ ಯಾತ್ರೆ, ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಯ ನಕಲು ಎನ್ನುವ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಯಾತ್ರೆಗಳನ್ನು ಆರಂಭ ಮಾಡಿದ್ದು ನಾವು, ರಥಯಾತ್ರೆ, ಪಾದಯಾತ್ರೆ ಮಾಡಿದ್ದು ನಾವು. ನಮ್ಮ ಯಾತ್ರೆಯಲ್ಲಿ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡು ಸರ್ಕಾರದ ಅಭಿವೃದ್ಧಿ ಕೆಲಸವನ್ನು ಜನರ ಬಳಿ ಹೇಳುತ್ತಿದ್ದೇವೆ," ಎಂದರು.

"ಕಳೆದ 60 ವರ್ಷದಿಂದ ಅಧಿಕಾರದಲ್ಲಿದ್ದವರನ್ನು ಜನ ತಿರಸ್ಕಾರ ಮಾಡಿದ್ದಾರೆ‌. ಅದಕ್ಕಾಗಿ ಕಾಂಗ್ರೆಸ್‌ ಅವರ ಯಾತ್ರೆ ಈಗ ಆರಂಭವಾಗಿದೆ. ಕಾಂಗ್ರೆಸ್‌ 10 ವರ್ಷದಿಂದ ಪಾದಯಾತ್ರೆ ಮಾಡಬಹುದಿತ್ತು. ಯಾಕೆ ಜ್ಯೋತಿಷಿಗಳು ಹೇಳಲಿಲ್ಲವಾ..? ರಾಹುಲ್ ಗಾಂಧಿಯವರು ಬಂದಿದ್ದಾರೆ ಅಂತಾ ಸಿದ್ದರಾಮಯ್ಯ, ಡಿಕೆಶಿ ಯಾತ್ರೆಯಲ್ಲಿದ್ದಾರೆ. ಸಿದ್ದರಾಮಣ್ಣ, ಡಿಕೆಶಿ ಇಬ್ಬರನ್ನು ಜೋಡಿಸುವ ಯಾತ್ರೆ ಇದಾಗಿದೆ," ಎಂದು ಭಾರತ ಜೋಡೋ ಯಾತ್ರೆಯನ್ನು ಟೀಕೆ ಮಾಡಿದ್ದಾರೆ.

Nalin Kumar Kateel Lashes Out At Congress

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡೆಯನ್ನು ವ್ಯಂಗ್ಯ ಮಾಡಿದ ನಳಿನ್ ಕುಮಾರ್ ಕಟೀಲ್, "ಸಿದ್ದರಾಮಯ್ಯ ಅಧಿಕಾರಕ್ಕಾಗಿ ತಿರುಕನ ಕನಸವನ್ನ ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಿಂದಿನ ಕ್ಷೇತ್ರ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ವರಣಾ ಕ್ಷೇತ್ರಕ್ಕೆ ಹೋಗುವಂತಿಲ್ಲ. ಬದಾಮಿಯಲ್ಲಿ ಓಡಿಸಿದ್ದಾರೆ. ಕೋಲಾರದಲ್ಲಿ ಜನ ಬೇಡ ಎಂದರು, ಅವರಿಗೆ ಮುಂದಕ್ಕೆ ಕ್ಷೇತ್ರಗಳಿಲ್ಲ ಹೀಗಾಗಿ ರಾಹುಲ್ ಗಾಂಧಿ ಜೊತೆ ಕ್ಷೇತ್ರ ಹುಡುಕುವ ಯಾತ್ರೆ ಮಾಡುತ್ತಿದ್ದಾರೆ," ಎಂದರು.

ಇನ್ನು" ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಆಗುತ್ತಾರೆ ಅಂತಾ ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಸಣ್ಣ ಭಯ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಮೂರನೇ ಶಕ್ತಿ ಕೇಂದ್ರ ಆರಂಭವಾಗುತ್ತಿದೆ. ಆ ಭಯ ಸಿದ್ದರಾಮಣ್ಣನಿಗೆ ಕಾಡುತ್ತಿದೆ. ಸಿದ್ದರಾಮಯ್ಯ ಖರ್ಗೆಯವರಿಗೆ ದೋಖಾ ಹೊಡೆದವರು. ಸಿಎಂ ಸ್ಥಾನಕ್ಕೆ ಏರಲಿಕ್ಕೆ ಬಿಡದವರು, ದಲಿತ ಮುಖ್ಯಮಂತ್ರಿ ಆಗಲು ಅಡ್ಡ ಹಾಕಿದವರು. ಖರ್ಗೆ ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡಿದವರು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯ ಅವರಿಗೆ ಸೀಟ್ ಇಲ್ಲ," ಎಂದು ಲೇವಡಿ ಮಾಡಿದರು.

ಇನ್ನು "ಸಿದ್ದರಾಮಯ್ಯ ಅವರು ನ್ಯಾಯವಾದಿಗಳಾಗಿದ್ದವರು, ಪುರಾವೆ ಇಲ್ಲದೆ ಆರೋಪ ಮಾಡಬಾರದು. ಸಿದ್ದರಾಮಯ್ಯ ಅವರ ಕಾಲದ ಅರ್ಕಾವತಿ ಪುರಾವೆಗಳು ನಮ್ಮ ಬಳಿ ಇವೆ. ಬೆಡ್ ಶೀಟ್ ಹಗರಣ, ಮೊಟ್ಟೆ ಹಗರಣಗಳ ದಾಖಲೆಗಳಿವೆ. ದಾಖಲೆ ಇಟ್ಟು ಮಾತಾಡ್ತೇವೆ. ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಅವರ ಎಲ್ಲ ನಾಯಕರು ಬೇಲ್‌ನಲ್ಲಿ ಹೊರಗೆ ಇದ್ದಾರೆ," ಎಂದು ನಳೀನ್‌ ಕುಮಾರ್‌ ಕಟೀಲ್‌ ವ್ಯಂಗ್ಯ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+