'ಎಸ್ಸೆಂ ಕೃಷ್ಣ ಅಳಿಯ ಸಿದ್ಧಾರ್ಥ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 17 : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂದು ಜನಸಂಗ್ರಾಮ ಪರಿಷತ್ ನ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

ಈ ಕುರಿತು ರವಿವಾರ ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರೇಮಠ, ಚಿಕ್ಕಮಗಳೂರ ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಸರಕಾರಿ ಜಮೀನನ್ನು ಸಿದ್ಧಾರ್ಥ ಒತ್ತುವರಿ ಮಾಡಿದ್ದಾರೆ ಎಂದು ದೂರಿದರು. [ಕೆಜೆ ಜಾರ್ಜ್ ವಿರುದ್ಧ ಹಿರೇಮಠ್ ಕೊಟ್ಟ ದಾಖಲೆಗಳೇನು?]

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕೂಡ ಪಟಂದೂರು ಅಗ್ರಹಾರದಲ್ಲಿ ಮೂರು ಎಕರೆ ಜಮೀನು ಕಬಳಿಸುವ ಹವಣಿಕೆಯಲ್ಲಿದ್ದಾರೆ ಆದ್ದರಿಂದ ಇಬ್ಬರ ಮೇಲೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು ಎಂದರು.

SR Hiremath demands criminal case against VG siddhartha for Land grab

ಮಾಜಿ ಮುಖ್ಯಮಂತ್ರಿ ಎಸ್ .ಎಂ.ಕೃಷ್ಣ ತಮ್ಮ ಅಳಿಯನನ್ನು ಉಳಿಸಿಕೊಳ್ಳಲು ಕೆಲವರೊಂದಿಗೆ ಸ್ನೇಹವನ್ನು ಸಂಪಾದಿಸಿಕೊಂಡಿದ್ದಾರೆ.

ಸಿದ್ಧಾರ್ಥ ಅವರ ಮೇಲೆ ಇದುವರೆಗೂ ಎಫ್ ಓಸಿ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ ಹಿರೇಮಠ, ಸರಕಾರ ಭ್ರಷ್ಟರನ್ನು ರಕ್ಷಿಸುತ್ತಿದೆ ಎಂದರು. ರಾಜ್ಯ ಸರಕಾರವು ಅಧಿಕಾರಿಗಳನ್ನು ಮತ್ತು ರಾಜಕೀಯ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಸಂವಿಧಾನದ ಕಾಯ್ದೆಗಳನ್ನೇ ಗಾಳಿಗೆ ತೂರುತ್ತಿದ್ದಾರೆ ಎಂದು ದೂರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social activist SR Hiremath today demanded police to file a criminal case against business man VG Siddhartha (son in law of SM Krishna) for encroaching the government land in Koppa Taluk, Chikkamagaluru.
Please Wait while comments are loading...