ಮೃತ ಮಗಳಿಗೆ ಧೈರ್ಯ ಹೇಳುತ್ತಾ 34 ಗಂಟೆ ಶವದ ಜೊತೆ ಕಳೆದ ತಾಯಿ

ಧಾರವಾಡ, ಮಾರ್ಚ್ 22: ನೋಡನೋಡುತ್ತಿದ್ದಂತೆಯೇ ಭೀಕರ ದುರಂತ ಸಂಭವಿಸಿಯೇ ಬಿಟ್ಟಿದೆ. ಹೆತ್ತು, ಹೊತ್ತು, ಮಗಳ ಬಾಲ್ಯವನ್ನು ಕಣ್ಣಾರೆ ಕಂಡು ಸಂತೋಷದಲ್ಲಿ ಮಿಂದೆದ್ದಿದ್ದ ತಾಯಿ ಅದೇ ಮಗಳ ಶವದೊಂದಿಗೆ 34 ಗಂಟೆಗಳನ್ನು ಕಳೆದಿದ್ದಾಳೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಆಕೆಗೆ ಹೇಗಾಗಬೇಡ ಜೊತೆಯಲ್ಲೇ ಆಡಿಕೊಂಡಿದ್ದ ಮಗಳು ಕೆಲವೇ ನಿಮಿಷಗಳಲ್ಲಿ ಹೆಣವಾಗಿದ್ದಾಳೆ. ಏಳು ಕಂದಾ ನಿನ್ನ ಅಮ್ಮ ಇಲ್ಲಿಯೇ ಇದ್ದೇನೆ ಎಂದು ಎಷ್ಟೇ ಗೋಗರೆದರೂ ಸದ್ದಿಲ್ಲ, ಮಗಳನ್ನು ಮುಟ್ಟಲ್ಲೂ ಸಾಧ್ಯವಾಗುತ್ತಿಲ್ಲ, ಆ ತಾಯಿಯ ಸಂಕಟ, ನೋವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಆದರೆ ಇಂತಹ ಮನಕಲಕುವ , ಹೃದಯ ವಿದ್ರಾವಕ ಘಟನೆಗೆ ಧಾರವಾಡದ ಕುಮಾರೇಶ್ವರ ನಗರದಲ್ಲಿನ ನಿರ್ಮಾಣ ಹಂತದ ಕಟ್ಟಡ ಸಾಕ್ಷಿಯಾಗಿದೆ. ತಾಯಿ ಪ್ರೇಮಾ ಬದುಕಿ ಉಳಿದಿದ್ದರೆ, ಸಾವಿನ ಕಟ್ಟಡದ ಕೆಳಗೆ ಏಳು ವರ್ಷದ ಬಾಲಕಿ ದಿವ್ಯಾ ಶವವಾಗಿ ಹೊರಬಂದಿದ್ದಾಳೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

mother stayed with daughter dead bosy for 34 hours

ಪ್ರೇಮಾ ಉಣಕಲ್ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಟೋಲ್‌ನಾಕಾ ಬಳಿ ವಾಸವಾಗಿದ್ದಾರೆ. ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಆಯುರ್ವೇದ ಉತ್ಪನ್ನಗಳ ನೆಟ್‌ವರ್ಕಿಂಗ್ ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮಾ.19ರಂದು ಮಧ್ಯಾಹ್ನ 3 ಗಂಟೆಗೆ ಕಚೇರಿಯ ಮೀಟಿಂಗ್ ಇತ್ತು ಆ ಮೀಟಿಂಗ್‌ಗೆ ಹಾಜರಾಗಲು ಪ್ರೇಮಾ ಮಗಳಾದ ಸಿವ್ಯಾಳನ್ನು ಕರೆದುಕೊಂಡು ಬಂದಿದ್ದರು. ಆ ವೇಳೆಯೇ ಕಟ್ಟಡ ಕುಸಿದಿದೆ. ಗಾಯಗೊಂಡಿದ್ದ ಮಗಳಿಗೆ ಧೈರ್ಯ ಹೇಳುತ್ತಲೇ ಇದ್ದರೂ ಕೆಲವೇ ಗಂಟೆಗಳಲ್ಲಿ ಮಗಳು ಕೊನೆಯುಸಿರೆಳೆದಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+