ದಾವಣಗೆರೆ ಬೆಣ್ಣೆದೋಸೆ ಸವಿದು 'ಸೂಪರ್' ಎಂದ ರಾಹುಲ್

Recommended Video

      ದಾವಣಗೆರೆಯಲ್ಲಿ ರಾಹುಲ್ ಗಾಂಧಿ ದಾವಣಗೆರೆ ಬೆಣ್ಣೆ ದೋಸೆಗೆ ಫುಲ್ ಫಿದಾ | Oneindia Kannada

      ದಾವಣಗೆರೆ, ಏಪ್ರಿಲ್ 04 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಾವಣಗೆರೆಯಲ್ಲಿ ಬೆಣ್ಣೆದೋಸೆ ರುಚಿಗೆ ಮನಸೋತು 'ಸೂಪರ್' ಎಂದಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಬೆಳಗ್ಗೆ ಬೆಣ್ಣೆದೋಸೆ ಸವಿದರು.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

      ಬುಧವಾರ ಬೆಳಗ್ಗೆ ಚಿತ್ರದುರ್ಗಕ್ಕೆ ಭೇಟಿ ನೀಡುವ ಮುನ್ನ ರಾಹುಲ್ ಗಾಂಧಿ ನಗರದ ಪಿಜೆ ಬಡಾವಣೆಯ ವಿಜಿ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಬೆಣ್ಣೆದೋಸೆ ಸವಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.

      2 ಬೆಣ್ಣೆದೋಸೆ ಸವಿದ ರಾಹುಲ್ ಗಾಂಧಿ 'ಸೂಪರ್' ಎಂದು ಹೇಳಿದರು. ಹೋಟೆಲ್ ಮಾಲೀಕನ ಕೈ ಕುಲುಕಿ ಮೆಚ್ಚುಗೆ ಸೂಚಿಸಿದರು. ರಾಹುಲ್ ಸೇರಿದಂತೆ ಇತರ 15 ನಾಯಕರು ಸೇರಿ 25 ಬೆಣ್ಣೆದೋಸೆಯನ್ನು ಸವಿದರು. ರಾಹುಲ್ ಗಾಂಧಿ ಮಾಲೀಕನಿಗೆ 800 ರೂ. ನೀಡಿದರು.

      Rahul Gandhi tastes Benne dose at Davanagere

      ಚಿತ್ರಗಳು: ದಾವಣಗೆರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

      ಬೆಣ್ಣೆದೋಸೆ ಸವಿದ ಬಳಿಕ ಪಕ್ಕದ ಪದ್ದು ಕಾಫಿಬಾರ್‌ಗೆ ಭೇಟಿ ನೀಡಿ ಟೀ ಪಡೆದರು. ಈ ಸಂದರ್ಭದಲ್ಲಿ ಅಲ್ಲಿದ್ದ ಜನರ ಜೊತೆ ಮಾತುಕತೆ ನಡೆಸಿದರು. ಅಭಿಮಾನಿಗಳ ಜೊತೆ ಸೆಲ್ಫೀ ತೆಗೆಸಿಕೊಂಡರು.

      Rahul Gandhi tastes Benne dose at Davanagere

      ಮಿರ್ಚಿ ಸವಿದಿದ್ದರು : ಫೆಬ್ರವರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ರಾಯಚೂರಿನ ಮೌಲಾ ಸಾಬ್ ಎಂಬುವವರ ಹೋಟೆಲ್‌ನಲ್ಲಿ ಮಿರ್ಚಿ ಸವಿದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+