'ನಾನು ಸಹ 2018ರ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ'

ಚಿತ್ರದುರ್ಗ, ಸೆಪ್ಟೆಂಬರ್ 26 : 'ನಾನು ಸಹ 2018ರ ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ' ಎಂದು ನಟಿ ಭಾವನಾ ಹೇಳಿದ್ದಾರೆ. ನಟಿ ಭಾವನಾ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದು, ಬಾಲಭವನದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ನಟಿ ಭಾವನಾ ರಾಮಣ್ಣ ಅವರು, 'ಕಲಾವಿದೆಯಾಗಿ, ರಾಜಕಾರಣಿಯಾಗಿ ನಾನು ಸದಾ ಜನರ ಜೊತೆಗಿದ್ದೇನೆ. ಸಾರ್ವಜನಿಕರೇ ನನಗೆ ಪ್ರಪಂಚ. ನಾನು ಸಹ 2018ರ ಚುನಾವಣೆಯ ಟಿಕೆಟ್ ಆಕಾಂಕ್ಷಿ' ಎಂದರು.

 I am also ticket aspirant for 2018 assembly elections says Bhavana Ramanna

'ಮಹಿಳೆ ಎಂಬ ಕಾರಣಕ್ಕೆ ಟಿಕೆಟ್ ನೀಡಿ ಎಂದು ಬೇಡಿಕೆ ಇಡುತ್ತಿಲ್ಲ. ಬದಲಾಗಿ ಅರ್ಹತೆ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ' ಎಂದು ಭಾವನಾ ಹೇಳಿದರು.

2013ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಸೇರಿದ್ದ ನಟಿ ಭಾವನಾ ಅವರು ಪಕ್ಷದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಬಾಲಭವನದ ಅಧ್ಯಕ್ಷರಾಗಿಯೂ ನೇಮಿಸಲಾಗಿತ್ತು.

2016ರ ಜನವರಿಯಲ್ಲಿ ಸಿನಿಮಾ ಕ್ಷೇತ್ರದಿಂದ ಭಾವನಾ ಅವರನ್ನು ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು. ಅಂಜಲಿ ನಿಂಬಾಳ್ಕರ್ ಅವರನ್ನು ಬಾಲಭವನದ ಅಧ್ಯಕ್ಷೆಯಾಗಿ ನೇಮಿಸಿದ ಬಳಿಕ ಭಾವನಾ ಅವರು ಸ್ಥಾನ ತ್ಯಜಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+