ಚಳ್ಳಕೆರೆಯಲ್ಲಿ ಮನೆ ಮಾಳಿಗೆ ಕುಸಿದು ನಾಲ್ವರ ದುರ್ಮರಣ

ಚಿತ್ರದುರ್ಗ, ಫೆಬ್ರವರಿ 9: ಮನೆಯ ಮಾಳಿಗೆ ಕುಸಿದು ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯ ರಾಮಜೋಗಿಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ನಾಗರತ್ನಮ್ಮ(30), ಮಕ್ಕಳಾದ ತೀರ್ಥವರ್ಧನ(4) ಕೋಮಲ(2), ಯಶಸ್ವಿನಿ(5) ಮೃತರು. ಚಂದ್ರಶೇಖರ್ ಹಾಗೂ ದೇವಿಕಾದಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

four people die after roof collapse
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಲಗಿದ್ದಲ್ಲಿಯೇ ತಾಯಿ ಮತ್ತು ಮೂವರು ಮಕ್ಕಳು ಶವವಾಗಿದ್ದಾರೆ, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ಮನೆಯ ಮಾಳಿಗೆ ಸಡಿಲವಾಗಿರುವುದು ಯಾರಿಗೂ ಗಮನಕ್ಕೇ ಬಂದಿರಲಿಲ್ಲ, ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಸಂತೋಷದಿಂದ ಮಲಗಿದ್ದರೆ ಬೆಳಗಾಗುವಷ್ಟೊತ್ತಿಗೆ ಶವವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+