ಚಿತ್ರದುರ್ಗ: ವೈದ್ಯನ ಅಕೌಂಟ್‌ನಿಂದಲೇ ಒಂದಲ್ಲ.. ಎರಡಲ್ಲ ಬರೋಬ್ಬರಿ ₹1,27,00,000 ದೋಚಿದ ವಂಚಕರು-ಹೇಗೆ ಸಾಧ್ಯ?
ಚಿತ್ರದುರ್ಗ, ಆಗಸ್ಟ್, 26: ಸೈಬರ್ ವಂಚಕರು ಸಾಮಾನ್ಯ ಜನರನ್ನು ಬಲಿಪಶುಗಳಾಗಿಸಿಕೊಂಡು ಆನ್‌ಲೈನ್ ಮೂಲಕ ಆಸೆ, ಆಮಿಷಗಳನ್ನೊಡ್ಡಿ ಹಣ ದೋಚಿರುವ ಪ್ರಕರಣಗಳು ದಾಖಲಾದ ಉದಾಹರಣೆಗಳಿವೆ. ಆದರೆ ಇದೀಗ, TRAI & ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿದ್ದ ಸೈಬರ್ ವಂಚಕರು ಹಿರಿಯ ವೈದ್ಯರೊಬ್ಬರ ಬಳಿ 1 ಕೋಟಿ 27ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸೈಬರ್ ವಂಚಕರು ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ 1 ಕೋಟಿ 27 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಹಾಗಾದರೆ ಇದು ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

TRAI & ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ವಾಟ್ಸಪ್ ಕಾಲ್ & ನಾರ್ಮಲ್ ಕಾಲ್ ಮಾಡಿ ನಂಬಿಸಿ ದಾಖಲೆ ಕೇಳಿದ್ದಾರೆ. ಬಳಿಕ ಅವರ ಖಾತೆಗೆ 1 ಕೋಟಿ 27 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿ ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎನ್.ಮಹೇಶ್ ಮನೆಯಲ್ಲಿ ಕಳ್ಳತನ: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕರ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಸಾಮಾನ್ಯ ಜನರ ಮನೆಗಳಿಗೆ ಕಳ್ಳರು ನುಗ್ಗಿ ದೋಚಿರುವ ಘಟನೆಗಳು ನಡೆದಿವೆ. ವಿಚಿತ್ರ ಎಂದರೆ ಇದೀಗ ಮಾಜಿ ಶಿಕ್ಷಣ ಸಚಿವ, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ಕೊಳ್ಳೆಗಾಲದ ಮನೆಯಲ್ಲಿ ಕಳ್ಳತನವಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಅವರ ನಿವಾಸವಿದ್ದು, ನಿನ್ನೆ ಸಂಜೆವರೆಗೆ ಮನೆಯಲ್ಲಿದ್ದ ಎನ್.ಮಹೇಶ್ ಅವರು ಬೆಂಗಳೂರಿಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಹೊಂಚು ಹಾಕುತ್ತಿದ್ದ ಖರ್ತನಾಕ್ ಕಳ್ಳರು ರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ನೆರೆ ಮೆನೆಯವರಿಂದ ಎನ್.ಮಹೇಶ್ ಮನೆಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲಿ ಏನು ಕಳುವಾಗಿದೆ ಎಂದು ತಿಳಿದು ಬಂದಿಲ್ಲವಾದರೂ ಮಹೇಶ್ ಅವರು ಬಂದು ವಸ್ತುಗಳ ಮಾಹಿತಿ ನೀಡಿದ ಬಳಿಕ ಕಳವಿನ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲಿದೆ.












Click it and Unblock the Notifications