ಮೋದಿ ಇನ್ನೂ 8 ವರ್ಷ ಪ್ರಧಾನಿಯಾಗಿರುತ್ತಾರೆ:ಮತ್ತೆ ಭವಿಷ್ಯ ನುಡಿದ ವಿನಯ್ ಗುರೂಜಿ
Recommended Video

ಚಿಕ್ಕಮಗಳೂರು, ಏಪ್ರಿಲ್ 14:ನರೇಂದ್ರ ಮೋದಿ ಅವರು ಇನ್ನೂ 8 ವರ್ಷಗಳ ಕಾಲ ಪ್ರಧಾನಿಯಾಗಿರುತ್ತಾರೆಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಲ್ಲದೆ 8 ವರ್ಷಗಳಿಂದ ಪೂಜಿಸುತ್ತಾ ಬಂದಿದ್ದ, ತಮ್ಮ ಬಳಿಯಿದ್ದ ಶ್ರೀರಾಮ ಧನಸ್ಸನ್ನು ವಿನಯ್ ಗುರೂಜಿ ಪ್ರಧಾನಿ ಮೋದಿಗೆ ಕೊಟ್ಟಿದ್ದಾರೆ. ರಾಮನವಮಿಯಂದು ಈ ಧನಸ್ಸಿಗೆ ವಿಶೇಷ ಪೂಜೆ ಮಾಡುತ್ತಿದ್ದ ಗುರೂಜಿ, ರಾಮನವಮಿಯ ಪವಿತ್ರ ದಿನದಂದೇ ಮೋದಿಯವರಿಗೆ ಈ ಧನಸ್ಸನ್ನು ಕೊಟ್ಟಿದ್ದಾರೆ.
8 ವರ್ಷಗಳ ಹಿಂದೆಯೇ ಮೋದಿ ಪ್ರಧಾನಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದ ಗುರೂಜಿ, ಇದೀಗ ಮೋದಿ ಇನ್ನೂ 8 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸುತ್ತಾರೆಂದು ಭವಿಷ್ಯ ನುಡಿದಿದ್ದಾರೆ.

ಶನಿವಾರ (ಏ.13) ಬೆಂಗಳೂರಿಗೆ ಭೇಟಿ ನೀಡಿದ ವೇಳೆಯಲ್ಲಿ ಉತ್ತರಹಳ್ಳಿ ಶಾಖಾ ಮಠದಿಂದ ಉಡುಗೊರೆ ಜೊತೆಗೆ ಭವಿಷ್ಯವಾಣಿಯನ್ನು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮ ಅವದೂತರಾಗಿರುವ ವಿನಯ್ ಗುರೂಜಿ ಅವರನ್ನು ಇದುವರೆಗೆ ಸ್ಪೀಕರ್ ರಮೇಶ್ ಕುಮಾರ್, ದೇವೇಗೌಡ, ಯಡಿಯೂರಪ್ಪ ಶೋಭಾ ಕರಂದ್ಲಾಜೆ, ಸಿಎಂ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಹಲವು ನಾಯಕರು ಭೇಟಿ ಮಾಡಿದ್ದಾರೆ. ಪ್ರತಿ ಗುರುವಾರ ಮಾತ್ರ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.












Click it and Unblock the Notifications