• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದ್ದ ವೈ.ಎಸ್.ವಿ ದತ್ತ ಆಡಿಯೋ ವೈರಲ್..!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 11: ಕಾಂಗ್ರೆಸ್ ಗೆ ಕಳೆದ ಮಾರ್ಚ್ 15ಕ್ಕೆ ಕಾಂಗ್ರೆಸ್ ಸೇರುತ್ತಿರುವುದಾಗಿ ಜೆಡಿಎಸ್ ಮುಖಂಡ ಹಾಗೂ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರ ಆಡಿಯೋ ಸಂಭಾಷಣೆಯೊಂದು ಇದೀಗ ಹರಿದಾಡುತ್ತಿದೆ.

ತೆನೆ ಬಾರ (ಜೆಡಿಎಸ್) ಇಳಿಸಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ 'ನಾನಿನ್ನೂ ಜೆಡಿಎಸ್ ನಲ್ಲೇ ಇದ್ದೇನೆ ಕಾಂಗ್ರೆಸ್ ಸೇರುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಳು ಊಹಾಪೋಹ' ಎಂದು ಹೇಳಿದ್ದರು. ಅದು ಅಲ್ಲದೆ ಚಿಕ್ಕಮಗಳೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲೂ ಸಹ ಭಾಗಿಯಾಗಿದ್ದರು.

ನಾನು ಇನ್ನೂ ಜೆಡಿಎಸ್ ನಲ್ಲೇ ಇದ್ದೇನೆ.. ಜೆಡಿಎಸ್ ನಲ್ಲೇ ಇರುತ್ತೇನೆ..!

ತೆನೆ ಬಾರ (ಜೆಡಿಎಸ್) ಇಳಿಸಿ ಕಾಂಗ್ರೆಸ್ ಸೇರ್ಪಡೆಯಾಗಲಿದೆ ಎಂದು ಕೇಳಿಬರುತ್ತಿದ್ದ ಕಡೂರು ಮಾಜಿ ಜೆಡಿಎಸ್ ಶಾಸಕ ವೈ.ಎಸ್.ವಿ ದತ್ತ ಅವರು ಇಂದು ಚಿಕ್ಕಮಗಳೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ನಾನಿನ್ನೂ ಜೆಡಿಎಸ್ ನಲ್ಲೇ ಇದ್ದೇನೆ ಕಾಂಗ್ರೆಸ್ ಸೇರುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಳು ಊಹಾಪೋಹ' ಎಂದು ಹೇಳಿದ್ದರು. ಅದರಂತೆ ಇಂದು ಚಿಕ್ಕಮಗಳೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

ಯಾವುದೋ ವ್ಯವಹಾರ ಸಂಬಂಧಪಟ್ಟಂತೆ ಚೆಕ್ ಕೊಡುವ ವಿಚಾರದಲ್ಲಿ ಮಾತಾಡಿರುವ ಆಡಿಯೋ ಸಂಭಾಷಣೆ ಇದಾಗಿದೆ. ಅದು ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿ 'ಸಿದ್ದರಾಮಣ್ಣ ನನ್ನನ್ನ ಕಾಂಗ್ರೆಸ್ ಗೆ ಬಾ ಮಂತ್ರಿ ಮಾಡುತ್ತೇನೆ' ಎಲ್ಲಾ ರೀತಿಯಲ್ಲೂ ನಿನಗೆ ಕಾಂಗ್ರೆಸ್ ಪಕ್ಷದಲ್ಲಿ ಅನುವು ಮಾಡಿಕೊಡುತ್ತೇನೆ ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದು ಹೇಳಿರುವ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ.

ಇನ್ನೂ ನಿನ್ನೆಮೊನ್ನೆಯಷ್ಟೇ ಚಿಕ್ಕಮಗಳೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮ ನಡೆಯಿತು. ಬಹಳ ಕುತೂಹಲ ಕೆರಳಿಸಿದ್ದ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡ ಅಪ್ಪಟ ಶಿಷ್ಯ ಹಾಗೂ ಜೆಡಿಎಸ್ ನಿಷ್ಟಾವಂತ ಎಂಬಂತೆ ಹೆಚ್.ಡಿ ದೇವೇಗೌಡರ ಪಕ್ಕದಲ್ಲೇ ಕುಳಿತು ಕಾರ್ಯಕ್ರಮ ಮುಗಿಯುವವರೆಗೂ ಜೊತೆಯಲ್ಲೇ ಇದ್ದರು.

JDS leader YSV Datta telephonic audio leaked

ಇದೀಗ ಮೊನ್ನೆಯಷ್ಟೇ ನಡೆದ ಜೆಡಿಎಸ್ ಜನತಾ ಜಲಧಾರೆ ರಥಯಾತ್ರೆ ಬಳಿಕ ಕಾಂಗ್ರೆಸ್ ಸೇರುವ ಆಡಿಯೋ ಸಂಭಾಷಣೆ ಜೆಡಿಎಸ್ ಪಾಳಯದಲ್ಲಿ ಸಾಕಾಷ್ಟು ಅಚ್ಚರಿ ಮೂಡಿಸಿದ್ದು, ಯಾವುದೋ ವ್ಯವಹಾರ ಸಂಬಂಧಪಟ್ಟಂತೆ ಚೆಕ್ ವಿಚಾರದಲ್ಲಿ ಮಾತಾಡುತ್ತಿರುವ ಕಾಂಗ್ರೆಸ್ ಸೇರುವ ಬಗ್ಗೆ ಪ್ರಸ್ತಾಪಿಸಿರುವ ಆಡಿಯೋ ಸಂಭಾಷಣೆ ಲೀಕ್ ಬಗ್ಗೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

English summary
JDS leader YSV Datta telephonic audio has been leaked, this audio contains The function " Janatha Jaladaare Rathayathra" which is conducted in Chilkamangaluru yesterday, there the ex chief minister Siddaramaiah told to YSV Datta to make him as a MLA when he join to Congress party , So YSV Datta is decided to join congress on 15 th March,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X