ತಡರಾತ್ರಿ ಪೊಲೀಸ್ ವಸತಿ ಗೃಹಕ್ಕೆ ನುಗ್ಗಿದ ಅನುಮಾನಾಸ್ಪದ ವ್ಯಕ್ತಿ ಮಾಡಿದ್ದೇನು?

ಚಿಕ್ಕಬಳ್ಳಾಪುರ, ಆಗಸ್ಟ್ 27: ತಡರಾತ್ರಿ ಪೊಲೀಸ್ ವಸತಿಗೃಹಕ್ಕೆ ಅನುಮಾನಾಸ್ಪದ ವ್ಯಕ್ತಿ ನುಗ್ಗಿದ್ದು, ಪೊಲೀಸರಿಗೆ ಆತಂಕ ಉಂಟು ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಆತ ಒಳ ನುಗ್ಗಿದ್ದಷ್ಟೇ ಅಲ್ಲದೆ 12 ಮನೆಗಳನ್ನು ಹೊರಗಡೆ ಇಂದ ಲಾಕ್ ಮಾಡಿ, ಹೊರಗಡೆ ಇಂದ ಚೀರಾಡಿದ್ದಾನೆ.ಚಿಕ್ಕಬಳ್ಳಾಪುರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಆಂಧ್ರದ ಪುಟ್ಟಪರ್ತಿ ಮೂಲದ ರಾಜೇಂದ್ರ ಧಾಮಿ ಎಂಬುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಠಾಣೆಯಿಂದ ಬಿಡುಗಡೆ ಮಾಡಿ ಕಳುಹಿಸಿದರು. ಆದರೆ ಪೊಲೀಸ್ ಠಾಣೆಯಿಂದ ಹೊರಬಂದ ಅಸಾಮಿ ಸೀದಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಇದ್ದ ಪೊಲೀಸ್ ವಸತಿಗೃಹದ ಕಟ್ಟಡಕ್ಕೆ ನುಗ್ಗಿ ವಿಚಿತ್ರವಾಗಿ ವರ್ತಿಸಿದ್ದಾನೆ.

Suspicious Man Entered Into Police Residential Houses In Midnight

ಕಟ್ಟಡದಲ್ಲಿದ್ದ 12 ಮನೆಗಳಿಗೆ ಹೊರಗಡೆಯಿಂದ ಲಾಕ್ ಮಾಡಿ ಸೋನು ಸೋನು ಎಂದು ಕೂಗಾಟ ಚೀರಾಟ ನಡೆಸಿದ್ದಾನೆ. ಇದರಿಂದ ನಿದ್ರೆಗೆ ಜಾರಿದ್ದ ಪೊಲೀಸರು ಹಾಗೂ ಕುಟುಂಬಸ್ಥರು ಹೊರ ಬರೋಣ ಎಂದರೆ ಮನೆ ಹೊರಗಡೆಯಿಂದ ಲಾಕ್ ಆಗಿದೆ.

ಅಷ್ಟರಲ್ಲೇ ಅಕ್ಕಪಕ್ಕದ ಕಟ್ಟಡದವರು ಅನುಮಾನಸ್ಪದ ವ್ಯಕ್ತಿಯನ್ನು ಹಿಡಿಯಲು ಹೋದರೆ ಕಲ್ಲು ಹಾಗೂ ಅಲ್ಲಿದ್ದ ಕೋಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಅನುಮಾನಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದರು.

ಮತ್ತೊಂದೆಡೆ ಆತನ ಬಳಿ ಇದ್ದ ಬ್ಯಾಗಿನಲ್ಲಿ ಬ್ಲೇಡ್, ನೇಪಾಳ ದೇಶದ ನೋಟುಗಳು ಸಹ ಪತ್ತೆಯಾಗಿವೆ.ಥೇಟ್ ಸಿನಿಮಾ ಸ್ಟೈಲಲ್ಲಿ ಮಿಡ್ ನೈಟ್ ಮೆಂಟಲ್ ಮ್ಯಾನ್ ಅಪರೇಷನ್ ಮಾಡಿದ ಪೊಲೀಸರು ಅನುಮಾನಸ್ಪದ ವ್ಯಕ್ತಿಯ ವರ್ತನೆಗೆ ಹೈರಾಣಾಗಿ ಹೋಗಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ನಗರ ಪೊಲೀಸರು ಅರೆ ಹುಚ್ಚನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಮೆಂಟಲ್ ಮ್ಯಾನ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+