• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಐಎಡಿಎಂಕೆ ಫ್ಲ್ಯಾಗ್‌ಪೋಲ್‌ ತಪ್ಪಿಸಲು ಹೋಗಿ ಟ್ರಕ್ ಅಡಿಗಾದ ಯುವತಿ

|
Google Oneindia Kannada News

ಚೆನ್ನೈ, ನವೆಂಬರ್ 12: ಟೆಕ್ಕಿ ಶುಭಶ್ರೀ ಪ್ರಕರಣ ಮಾಸುವ ಮುನ್ನವೇ ಚೆನ್ನೈನಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನ ಹೆದ್ದಾರಿಯಲ್ಲಿ ಎಐಎಡಿಎಂಕೆ ಫ್ಲ್ಯಾಗ್‌ಪೋಲ್ ಬೀಳುವುದನ್ನು ತಪ್ಪಿಸಲು ಪ್ರಯತ್ನಿಸಿದ 30 ವರ್ಷದ ಯುವತಿಯೊಬ್ಬಳು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾಳೆ.

ಸ್ಕೂಟರ್ ಸವಾರಿ ಮಾಡುತ್ತಿದ್ದ ಅನುರಾಧಾ ರಾಜೇಶ್ವರಿ, ಭಾರೀ ವಾಹನದ ಮುಂಭಾಗದ ಬಲ ಚಕ್ರ ಹರಿದ ನಂತರ ಆಕೆಯ ಎರಡೂ ಕಾಲುಗಳು ಮುರಿದಿವೆ.

ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ

ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಟ್ರಕ್ ಚಾಲಕ ವೇಗದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್ವರಿ ಕಚೇರಿಗೆ ತೆರಳುತ್ತಿದ್ದರು

ರಾಜೇಶ್ವರಿ ಕಚೇರಿಗೆ ತೆರಳುತ್ತಿದ್ದರು

ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವೀಧರರಾದ ಎಂ.ಎಸ್.ರಾಜೇಶ್ವರಿ ಅಪಘಾತ ಸಂಭವಿಸಿದಾಗ ಅವರು ಕಚೇರಿಗೆ ತೆರಳುತ್ತಿದ್ದರು. ಪೋಷಕರ ಒಬ್ಬಳೇ ಮುದ್ದಿನ ಮಗಳು ರಾಜೇಶ್ವರಿ. ಇದೀಗ ಎರಡು ಕಾಲುಗಳನ್ನು ಕಳೆದುಕೊಂಡಿರುವ ಮಗಳನ್ನು ನೋಡಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಸೈಕಲ್ ಸವಾರನಿಗೂ ಡಿಕ್ಕಿ ಹೊಡೆದ ಟ್ರಕ್

ಸೈಕಲ್ ಸವಾರನಿಗೂ ಡಿಕ್ಕಿ ಹೊಡೆದ ಟ್ರಕ್

ಅದೇ ಟ್ರಕ್ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿಗೂ ಡಿಕ್ಕಿ ಹೊಡೆದಿದೆ. ಅವರಿಗೆ ಕೈ ಮತ್ತು ಮೊಣಕಾಲಿಗೆ ಗಾಯಗಳಾಗಿವೆ. ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ಟೆಕ್ಕಿಯೊಬ್ಬರು ಸಾವನ್ನಪ್ಪಿದ ಬಗ್ಗೆ ಸಾರ್ವಜನಿಕರ ಆಕ್ರೋಶದ ಹೊರತಾಗಿಯೂ ಈ ಅಪಘಾತ ಸಂಭವಿಸಿದೆ.

ಪಳನಿಸ್ವಾಮಿ ಸ್ವಾಗತಕ್ಕೆ ಸಿದ್ಧವಾಗಿತ್ತು ಫ್ಲ್ಯಾಗ್‌ಪೋಲ್

ಪಳನಿಸ್ವಾಮಿ ಸ್ವಾಗತಕ್ಕೆ ಸಿದ್ಧವಾಗಿತ್ತು ಫ್ಲ್ಯಾಗ್‌ಪೋಲ್

ಕೊಯಮತ್ತೂರಿನಲ್ಲಿ ಮುಖ್ಯಮಂತ್ರಿ ಇ ಪಳನಿಸ್ವಾಮಿಯನ್ನು ಸ್ವಾಗತಿಸಲು ಹೆದ್ದಾರಿಯಲ್ಲಿ ಎಐಎಡಿಎಂಕೆ ಹೋರ್ಡಿಂಗ್ ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಸುರಕ್ಷತೆಯ ಹಿತದೃಷ್ಟಿಯಿಂದ ರಸ್ತೆಯಲ್ಲಿ ಯಾವುದೇ ಹೋರ್ಡಿಂಗ್‌ಗಳನ್ನು ಇರಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಈ ಆದೇಶ ಹೊರತಾಗಿಯೂ ಬ್ಯಾನರ್, ಹೋರ್ಡಿಂಗ್‌ಗಳು ರಾರಾಜಿಸುತ್ತಿವೆ.

ಟೆಕ್ಕಿ ಶುಭಶ್ರೀ ಸಾವಿಗೆ ಕಾರಣವಾಗಿತ್ತು ಹೋರ್ಡಿಂಗ್

ಟೆಕ್ಕಿ ಶುಭಶ್ರೀ ಸಾವಿಗೆ ಕಾರಣವಾಗಿತ್ತು ಹೋರ್ಡಿಂಗ್

ಸೆಪ್ಟೆಂಬರ್ 1ರಂದು ಟಿಕ್ಕಿ ಶುಭಶ್ರೀ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹೋರ್ಡಿಂಗ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಕ್ರಮ ಹೋರ್ಡಿಂಗ್‌ಗಳ ಬಗ್ಗೆ ಅವರ ಪೋಷಕರು ಧ್ವನಿ ಎತ್ತಿದರೆ ಹೋರ್ಡಿಂಗ್ಸ್ದೇನು ತಪ್ಪಿಲ್ಲ ಗಾಳಿಯನ್ನು ಶಿಕ್ಷಿಸಿ ಎಂದು ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದರು.ಈ ಅಕ್ರಮ ಬ್ಯಾನರ್, ಹೋರ್ಡಿಂಗ್ಸ್‌ಗಳಿಂದ ಇನ್ನೆಷ್ಟು ಪ್ರಾಣಕ್ಕೆ ಕುತ್ತುಬರುತ್ತದೋ ತಿಳಿದಿಲ್ಲ.

English summary
woman who was riding a scooter was hit by a truck on Monday morning after she tried to avoid a falling flagpole of the AIADMK on a highway in Tamil Nadu's Coimbatore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X