ತಮಿಳುನಾಡು ಸರ್ಕಾರದಿಂದ 'ಅಮ್ಮ' ಸಿಮೆಂಟ್ ಬಿಡುಗಡೆ

ಚೆನ್ನೈ, ಜ.5: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಿರುವ ಎಐಎಡಿಎಂಕೆ ಸರ್ಕಾರ ಮತ್ತೊಂದು ಜನಪ್ರಿಯ ಯೋಜನೆಯನ್ನು ಘೋಷಿಸಿದೆ. ಸಬ್ಸಿಡಿ ದರದಲ್ಲಿ 'ಅಮ್ಮ' ಸಿಮೆಂಟ್ ಗಳನ್ನು ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ.

ಜಯಲಲಿತಾ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಅದನ್ನು ಪನ್ನೀರ್ ಸೆಲ್ವಂ ಸರ್ಕಾರ ಈಗ ಜಾರಿಗೊಳಿಸುತ್ತಿದೆ. ಖಾಸಗಿ ವಲಯದಿಂದ ಸುಮಾರು 2 ಲಕ್ಷ ಟನ್ ಗಳಷ್ಟು ಸಿಮೆಂಟ್ ಗಳನ್ನು ಸರ್ಕಾರ ಖರೀದಿಸಲಿದ್ದು ಅದನ್ನು 190 ಪ್ರತಿ ಕೆಜಿಯಂತೆ ಕಾರ್ಪೋರೇಷನ್, ಮುನ್ಸಿಪಾಲಿಟಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಲಿದೆ. [ದಿಲ್ಲಿಯಲ್ಲಿ ಜಯಮ್ಮ ಮೆಸ್ ಆರಂಭ]

ಇದಕ್ಕೂ ಮುನ್ನ ಎಐಎಡಿಎಂಕೆ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಜಯಲಲಿತಾ(ಅಭಿಮಾನಿಗಳ ಪಾಲಿನ ಅಮ್ಮ) ಹೆಸರಿನಲ್ಲಿ ಜಾರಿಗೊಳಿಸಿದ್ದಾರೆ.

Tamil Nadu govt launches ‘Amma Cement’

ಅಮ್ಮ ಮಿನರಲ್ ವಾಟರ್, ಕ್ಯಾಂಟೀನ್, ಉಪ್ಪು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಈಗ ಸಿಮೆಂಟಿನ ಸರದಿ.

ಸೋಮವಾರ ತಿರುಚನಾಪಳ್ಳಿಯ ಐದು ಗೋದಾಮಿನಲ್ಲಿ ಅಮ್ಮ ಸಿಮೆಂಟ್ ಮೂಟೆಗಳು ಮೊದಲ ಬಾರಿಗೆ ಪ್ರವೇಶ ಪಡೆದುಕೊಂಡವು. ಜ.10ರ ವೇಳೆಗೆ ತಮಿಳುನಾಡಿನಾದ್ಯಂತ ಸುಮಾರು 470 ಗೋದಾಮುಗಳಲ್ಲಿ ಅಮ್ಮ ಸಿಮೆಂಟ್ ಶೇಖರಣೆಯಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಈ ಯೋಜನೆ ಪ್ರಕಾರ ಫಲಾನುಭವಿಗಳು ಕನಿಷ್ಠ 50 ಬ್ಯಾಗ್ ಸಿಮೆಂಟ್ ಗಳನ್ನು 100 ಚ.ಅ ಹಾಗೂ 750 ಚೀಲದಷ್ಟು ಸಿಮೆಂಟ್ 1500 ಚದರ ಅಡಿಗಾಗಿ 190 ರು ನಂತೆ ಪಡೆದುಕೊಳ್ಳಬಹುದು. ಕಟ್ಟಡ ನಿರ್ಮಾಣಕ್ಕೂ ಮುನ್ನ ಸ್ಥಳೀಯ ಸಂಸ್ಥೆಯ ಅನುಮತಿ ಪತ್ರ ಅಗತ್ಯ.

ಮನೆ ರಿಪೇರಿ ಇನ್ನಿತರೆ ದುರಸ್ತಿ ಕಾರ್ಯಗಳಿಗೆ 10-100 ಚೀಲ ಸಿಮೆಂಟ್ ಲಭ್ಯವಿದೆ. ಸರ್ಕಾರದ ಸೌರಶಕ್ತಿಯುತ ಹಸಿರುಮನೆ ಹಾಗೂ ಕೇಂದ್ರ ಸರ್ಕಾರದ ಇಂದಿರಾ ಆವಾಸ ಯೋಜನಾ ಪೂರಕವಾಗಿ ಈ ಅಮ್ಮ ಸಿಮೆಂಟ್ ಯೋಜನೆ ಜಾರಿಗೊಳ್ಳಲಿದೆ(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+