ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಚುನಾವಣೆ: ನಟ, ರಾಜಕಾರಣಿ ಸೀಮನ್ ವಾರ್ಷಿಕ ಆದಾಯ ಕೇವಲ 1,000 ರೂ

|
Google Oneindia Kannada News

ಚೆನ್ನೈ, ಮಾರ್ಚ್ 19: ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಪಕ್ಷದ ಸ್ಥಾಪಕ, ನಟ ಮತ್ತು ನಿರ್ದೇಶಕ ಸೀಮನ್, ತಮಿಳುನಾಡಿನ ತಿರುವತ್ತಿಯೂರ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ತಮ್ಮ ವಾರ್ಷಿಕ ಆದಾಯ ಕೇವಲ 1,000 ರೂ. ಎಂದು ಅಫಿಡವಿಟ್‌ನಲ್ಲಿನ ಆಸ್ತಿ ವಿವರದಲ್ಲಿ ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೀಮನ್ ಅವರು ಮಾರ್ಚ್ 15ರಂದು ನಾಮಪತ್ರ ಸಲ್ಲಿಸಿದ್ದರು. ಅವರು 2019-20ನೇ ಸಾಲಿನಲ್ಲಿ ತಮ್ಮ ಆದಾಯ ಕೇವಲ 1,000 ರೂಪಾಯಿ ಎಂದು ನಮೂದಿಸಿರುವುದನ್ನು ಚುನಾವಣಾ ಆಯೋಗ ಪರಿಶೀಲನೆಗೆ ಒಳಪಡಿಸಲಿದೆ ಎನ್ನಲಾಗಿದೆ. ಅಫಿಡವಿಟ್‌ನಲ್ಲಿ ಸೀಮನ್ ವಿವರಿಸಿರುವ ಒಟ್ಟಾರೆ ಆಸ್ತಿ ವಿವರಕ್ಕೂ, ಅವರ ವಾರ್ಷಿಕ ಆದಾಯದ ಮಾಹಿತಿಗೂ ತಾಳೆಯಾಗುತ್ತಿಲ್ಲ.

ಕೇರಳ ಚುನಾವಣೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ಘೋಷಣೆಕೇರಳ ಚುನಾವಣೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ಘೋಷಣೆ

ಸೀಮನ್ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ 2018-19ರಲ್ಲಿ ಅವರ ವಾರ್ಷಿಕ ಆದಾಯ 12,716 ರೂಪಾಯಿ ಇತ್ತು. ಅದು 2019-20ನೇ ಸಾಲಿನಲ್ಲಿ 1,000 ರೂಪಾಯಿಗೆ ಕುಸಿದಿದೆ. ಇದೇ ವೇಳೆ ಅವರ ಪತ್ನಿಯ ವಾರ್ಷಿಕ ಆದಾಯ 2018-19 ನೇ ಸಾಲಿನ 7,036 ರೂಪಾಯಿಯಿಂದ 20019-20ನೇ ಸಾಲಿನಲ್ಲಿ 72,820 ರೂಪಾಯಿಗೆ ಏರಿಕೆಯಾಗಿದೆ.

Seeman Declares Year Income As Rs 1000 In Election Affidavit

ಅವರ ಅಫಿಡವಿಟ್ ಪ್ರಕಾರ 31 ಲಕ್ಷ ರೂ ಮೌಲ್ಯದ ಚರ ಆಸ್ತಿ ಇದೆ. ಆದರೆ ಸ್ಥಿರ ಆಸ್ತಿ ಏನೂ ಇಲ್ಲ. ಅವರ ಪತ್ನಿ ಕಾಯಲ್ವಿಲಿ ಬಳಿ 63.2 ಲಕ್ಷ ಮೌಲ್ಯದ ಚರ ಹಾಗೂ 31 ಲಕ್ಷ ಮೌಲ್ಯದ ಸ್ಥಿರ ಆಸ್ತಿ ಇದೆ.

ತಮ್ಮ ಆದಾಯದ ವಿವರದಲ್ಲಿ ಆಕಸ್ಮಿಕವಾಗಿ ತಪ್ಪು ಮಾಹಿತಿ ನಮೂದಾಗಿದೆ. ಈ ಬಗ್ಗೆ ತಮ್ಮ ವಕೀಲರ ಜತೆ ಸಮಾಲೋಚನೆ ನಡೆಸಿರುವುದಾಗಿ ಸೀಮನ್ ತಿಳಿಸಿದ್ದಾರೆ. ಕಾನೂನಿನ ಪ್ರಕಾರ ನಾಮಪತ್ರ ಪರಿಶೀಲನೆಗೂ ಮುನ್ನ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ನಾಮಪತ್ರದಲ್ಲಿನ ತಪ್ಪುಗಳನ್ನು ಸರಿಪಡಿಸಲು ಈಗ ಅವಕಾಶವಿದೆ.

English summary
Seeman Declared Rs 1000 as yearly income in election affidavit while filing nomination on March 15 from Tiruvottiyur constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X