ಪ್ರೀತಿಸಿದವಳಿಗಾಗಿ ಸ್ನೇಹಿತನಿಗೆ ಚಾಕುವಿನಿಂದ ಇರಿದ ಎಂಟೆಕ್ ವಿದ್ಯಾರ್ಥಿ
ಚೆನ್ನೈ, ಫೆಬ್ರವರಿ 14: ಒಂದು ಕಡೆ ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಇನ್ನೊಂದೆಡೆ ಪ್ರೀತಿಸಿದವಳಿಗಾಗಿ ಸ್ನೇಹಿತನಿಗೇ ಚಾಕುವಿನಿಂದ ಇರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪ್ರೀತಿ ಎನ್ನುವುದು ಸ್ನೇಹಕ್ಕೆ ಅಡಿಪಾಯವೂ ಆಗಬಹುದು ಸಂಬಂಧವೂ ಹಾಳಾಗಬಹುದು ಎರಡು ಶಕ್ತಿ ಅದಕ್ಕಿದೆ.ಚೆನ್ನೈನ ಐಐಟಿ ಮದ್ರಾಸ್‌ನಲ್ಲಿ ಎಂ.ಟೆಕ್ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು, ಇಬ್ಬು ಒಂದೇ ಹುಡುಗಿಯನ್ನು ಪ್ರೀತಿಸಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ. ಹುಡುಗಿ ವಿಚಾರದಲ್ಲಿ ಆರಂಭವಾದ ಜಗಳ ತಾರಕಕ್ಕೇರಿ ಓರ್ವ ವಿದ್ಯಾರ್ಥಿ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದಾನೆ. ಇದೆಲ್ಲವೂ ಚೆನ್ನೈನ ಸೆಂಟ್ರಲ್ ಲೈಬ್ರರಿಯಲ್ಲಿ ನಡೆದಿದೆ.

ಪ್ರಮೋದ್ ಕೌಶಿಕ್(ಹಲ್ಲೆಗೊಳಗಾದವನು) ಚಾಕು ಇರಿದ ವಿದ್ಯಾರ್ಥಿಯನ್ನು ಮನೋಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಹರ್ಯಾಣ ಮೂಲದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೌಶಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಟ್ಟೂರು ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.












Click it and Unblock the Notifications