1-2 ದಿನದಲ್ಲಿ ನಡೆಯಲಿದೆ ಜಲ್ಲಿಕಟ್ಟು -ಪನ್ನೀರ್ ಸೆಲ್ವಂ

Subscribe to Oneindia Kannada

ಚೆನ್ನೈ, ಜನವರಿ 20: ಜಲ್ಲಿಕಟ್ಟು ನಿಷೇಧ ವಾಪಸ್ ತೆಗೆದುಕೊಳ್ಳಲು ಕೇಂದ್ರ ಸರಕಾರ ತಿದ್ದುಪಡಿ ತರುವ ಸಾಧ್ಯತೆ ಇದೆ. ಒಂದೆರಡು ದಿನದಲ್ಲಿ ಜಲ್ಲಿಕಟ್ಟು ನಡೆಸಲು ಅನುವು ಮಾಡಿಕೊಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಒಂದರಿಂದ ಎರಡು ದಿನದಲ್ಲಿ ಜಲ್ಲಿಕಟ್ಟು ನಡೆಯುವ ಎಲ್ಲಾ ಸಾಧ್ಯತೆ ಇದೆ. ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿಯಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.[ಸುಗ್ರೀವಾಜ್ಞೆ ಹೊರಡಿಸುವವರೆಗೆ ಜಲ್ಲಿಕಟ್ಟು ಪ್ರತಿಭಟನೆ ನಿಲ್ಲಲ್ಲ!]

Jalikattu will be organized within 1-2 days - Panneerselvam

"ಜಲ್ಲಿಕಟ್ಟು ನಡೆಸಲು ಕೇಂದ್ರ ಸರಕಾರ ತಿದ್ದುಪಡಿ ತರಬೇಕಾಗಿದ್ದು ಕರಡು ಸಿದ್ಧತೆ ನಡೆಯುತ್ತಿದೆ. ನಾನು ತಮಿಳುನಾಡಿನ ಹಿರಿಯ ಅಧಿಕಾರಿಗಳನ್ನು ಕೇಂದ್ರದ ಜತೆ ಸೇರಿ ಕರಡು ಸಿದ್ಧಪಡಿಸಲು ಕಳುಹಿಸಿಕೊಟ್ಟಿದ್ದೇನೆ. ತಮಿಳುನಾಡು ಸರಕಾರದ ಕಡೆಯಿಂದ ಕರಡು ಪ್ರತಿಯನ್ನು ಕೇಂದ್ರ ಗೃಹ ಇಲಾಖೆಗೆ ಇಂದು ಬೆಳಿಗ್ಗೆ ಕಳುಹಿಸಿಕೊಡಲಾಗಿದೆ. ನನ್ನ ಪ್ರಕಾರ ಒಂದೆರಡು ದಿನದಲ್ಲಿ ಕರಡು ಸಿದ್ಧವಾಗಲಿದೆ," ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]

ಹೀಗಾಗಿ ಪ್ರತಿಭಟನಾಕಾರರು ತಕ್ಷಣ ತಮ್ಮ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪರಿಸರ ಸಚಿವರ ಭೇಟಿ
ಇದೇ ವೇಳೆ ಇಂದು ಪೊನ್ ರಾಧಾಕೃಷ್ಣನ್, ತಮಿಝಿಸಾಯಿ ಸುಂದರಾಜನ್ ಮತ್ತು ಜಲ್ಲಿಕಟ್ಟು ಒಕ್ಕೂಟದ ಅಧಿಕಾರಿಗಳು ಪರಿಸರ ಮತ್ತು ಅರಣ್ಯಖಾತೆ ರಾಜ್ಯ ದರ್ಜೆ ಸಚಿವ ಅನಿಲ್ ದವೆಯವರನ್ನು ಭೇಟಿಯಾಗಿ ತಮ್ಮ ಅಹವಾಲು ಮಂಡಿಸಲಿದ್ದಾರೆ.

ಇನ್ನು ಮಂಬಾಳಂನಲ್ಲಿ ಡಿಎಂಕೆ ಕಾರ್ಯಕರ್ತರು ಜಲ್ಲಿಕಟ್ಟು ನಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಕೂಡಾ ಭಾಗವಹಿಸಿದ್ದಾರೆ. ಅತ್ತ ಮರೀನಾ ಬೀಚಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu Chief Minister O Panneerselvam said that, There are full chances that Jalikattu will be organized within 1-2 days, therefore we protesters to withdraw immediately.
Please Wait while comments are loading...