Get Updates
Get notified of breaking news, exclusive insights, and must-see stories!

Kambala: ಜಲ್ಲಿಕಟ್ಟು, ಕಂಬಳಕ್ಕೆ ಅವಕಾಶ : ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಕಂಬಳ ಸಮಿತಿ

ದಕ್ಷಿಣ ಕನ್ನಡ, ಮೇ 19: ಕಂಬಳಕ್ಕೆ ಅವಕಾಶ ಕಲ್ಪಿಸಿ ಕರ್ನಾಟಕ ಮಾಡಿರುವ ತಿದ್ದುಪಡಿಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಿಲ್ಲಾ ಕಂಬಳ ಸಮಿತಿ ಸ್ವಾಗತಿಸಿದೆ.

ಕರ್ನಾಟಕದ ಕರಾವಳಿ ಭಾಗದ ಕಂಬಳ, ಮಹಾರಾಷ್ಟ್ರದ ಚಕ್ಕಡಿ ಸ್ಪರ್ಧೆ ಮತ್ತು ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗಳಿಗೆ ಸುಪ್ರೀಂ ಹಸಿರು ನಿಶಾನೆ ನೀಡಿದೆ. ಜಲ್ಲಿಕಟ್ಟು, ಎತ್ತಿನಗಾಡಿ ಓಟ ಮತ್ತು ಕಂಬಳಕ್ಕೆ ಅವಕಾಶ ಕಲ್ಪಿಸುವ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ 1960ಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಶಾಸಕರು ಮಾಡಿದ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ಗುರುವಾರ ಎತ್ತಿ ಹಿಡಿದಿದೆ.

Kambala Samiti welcomed Supreme Court Upholds Amendments

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗಡೆ ಎರ್ಮಾಳ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಬೆಂಬಲ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿ, ಕಂಬಳ ಕೇವಲ ಕ್ರೀಡಾಕೂಟವಲ್ಲ ಬದಲಾಗಿ ದೈವಾರಾಧನೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

"ನಾವು ಕಂಬಳವನ್ನು ನಮ್ಮ ಪೂಜೆಯ ಜೊತೆಗೆ ಬಂದಿರುವ ಸಂಪ್ರದಾಯದಂತೆ ಮುಂದುವರಿಸಿಕೊಂಡು ಬಂದಿದ್ದೇವೆ. ಈ ತೀರ್ಪನ್ನು ನಾವು ಪೂಜಿಸುವ ದೇವತೆಗಳ ಆಶೀರ್ವಾದ ಎಂದು ಪರಿಗಣಿಸುತ್ತೇನೆ. ಕರಾವಳಿ ಜಿಲ್ಲೆಗಳಲ್ಲಿ ಕಂಬಳ ನಡೆಸುವ ಮೂಲಕ ಸಂಪ್ರದಾಯ ಮುಂದುವರಿಸುತ್ತೇವೆ. ಕಾರ್ಯಕ್ರಮಗಳನ್ನು ನಡೆಸುವಾಗ ನಾವು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುತ್ತೇವೆ. ನವೆಂಬರ್‌ನಲ್ಲಿ ಆರಂಭವಾಗಲಿರುವ ಕಂಬಳ ಸೀಸನ್‌ಗೂ ಮುನ್ನ ಕರಾವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ" ಎಂದು ಯೆರ್ಮಾಳ್ ಹೇಳಿದರು.

Kambala Samiti welcomed Supreme Court Upholds Amendments

ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, "ಕರಾವಳಿ ಕರ್ನಾಟಕದ ಸಂಸ್ಕೃತಿಯ ಭಾಗವಾಗಿರುವ ಕಂಬಳಕ್ಕೆ ಸಂಬಂಧಿಸಿದ ಎಲ್ಲ ಆತಂಕಗಳನ್ನು ಸುಪ್ರೀಂ ಕೋರ್ಟ್ ತೀರ್ಪು ದೂರವಾಗಿಸಿದೆ. ಕಂಬಳಕ್ಕಾಗಿ ಹೋರಾಟ ನಡೆಸುತ್ತಿರುವ ತುಳುನಾಡಿನ ಜನತೆಗೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್‌ನ ತೀರ್ಪು ಕಂಬಳ ಸಂಘಟಕರಿಗೆ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲು ಸಹಾಯ ಮಾಡುತ್ತದೆ," ಎಂದು ಹೇಳಿದರು.

ಇದು ಕರಾವಳಿ ಭಾಗದ ಕಂಬಳ ಅಭಿಮಾನಿಗಳ ಗೆಲುವಾಗಿದೆ ಎಂದು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಹೇಳಿದ್ದಾರೆ. ಈ ತೀರ್ಪು ಕರಾವಳಿಯ ಕಂಬಳ ಅಭಿಮಾನಿಗಳಲ್ಲಿ ಸಂತಸ ತಂದಿದೆ ಎಂದರು.

Kambala Samiti welcomed Supreme Court Upholds Amendments

ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪೆಟಾ ಅಸಮಾಧಾನ

ಪೆಟಾ ಇಂಡಿಯಾದ ವಕೀಲರ ಯೋಜನೆಗಳ ಉಪ ನಿರ್ದೇಶಕ ಹರ್ಷಿಲ್ ಮಹೇಶ್ವರಿ ಪ್ರತಿಕ್ರಿಯೆ ನೀಡಿ, "ಪ್ರಾಣಿಗಳನ್ನು ಒಳಗೊಂಡ ಗ್ಲಾಡಿಯೇಟರ್ ಆಟಗಳು ಸುಮಾರು 7 ನೇ ಶತಮಾನದಯಲ್ಲಿ ಕೊನೆಗೊಂಡವು. ಪ್ರಪಂಚದಾದ್ಯಂತದ ದೇಶಗಳು ಪ್ರಾಣಿಗಳ ಸರ್ಕಸ್ ಮತ್ತು ಇತರ ಕ್ರೂರ ಘಟನೆಗಳನ್ನು ನಿಷೇಧಿಸುತ್ತಿವೆ. 2023 ರಲ್ಲಿ, ಜಲ್ಲಿಕಟ್ಟು ಮತ್ತು ಗೂಳಿ ಓಟದ ಸ್ಪರ್ಧೆಗಳಲ್ಲಿ ಪ್ರಾಣಿ ಹಿಂಸಿ, ಮೂಳೆ ಮುರಿತಗಳು ಮತ್ತು ರಕ್ತಸಿಕ್ತ ಗಾಯಗಳನ್ನು ಸಹಿಸಿಕೊಳ್ಳಲು ಸೂಕ್ಷ್ಮವಾದ ಗೂಳಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ, ಇದು ದೇಶವನ್ನು ಕತ್ತಲೆಯ ಯುಗಕ್ಕೆ ತಳ್ಳಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಎತ್ತುಗಳು ಮತ್ತು ಎಮ್ಮೆಗಳನ್ನು ಶೋಷಿಸುವ ಆಟಗಳಿಂದ ದೂರವಿರಲು ಪೆಟಾ ಇಂಡಿಯಾ ಎಲ್ಲರಿಗೂ ಕರೆ ನೀಡುತ್ತಿದೆ, ಪ್ರಾಣಿಗಳನ್ನು ರಕ್ಷಿಸಲು ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ" ಎಂದು ಮಹೇಶ್ವರಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+