ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಮತ್ತೋರ್ವ ಬಲಿ: 30 ಮಂದಿ ಸ್ಥಿತಿ ಗಂಭೀರ
Recommended Video
ಚೆನ್ನೈ, ಜನವರಿ 20: ಸುಪ್ರೀಂಕೋರ್ಟ್ ಆದೇಶದ ಬಳಿಕ ಅಧಿಕಾರಿಗಳ ತಂಡ ನಿಗಾದೊಂದಿಗೆ ಜಲ್ಲಿಕಟ್ಟು ನಡೆಯುತ್ತಿದೆ. ಆದಾಗ್ಯೂ ಮಧುರೈನ ಆವನಿಪುರಂನಲ್ಲಿ ಓರ್ವ ಮೃತಪಟ್ಟಿದ್ದಾರೆ.
ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ. ಜೊತೆಗೆ ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಒಂದು ಹೋರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 600 ಹೋರಿಗಳು ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದವು. ಈ ವೇಳೆ ತಮಿಳುನಾಡಿನ ಸಚಿವ ಜಿ.ಭಾಸ್ಕರನ್ ಮತ್ತು ಜಿಲ್ಲಾಧಿಕಾರಿ ಜಯಕಾಂತನ್ ಪಾಲ್ಗೊಂಡಿದ್ದರು.

ಈ ಜಲ್ಲಿಕಟ್ಟು ಕ್ರೀಡೆಯನ್ನು ಸೇಂಟ್ ಆಂಟೋನಿ ಚರ್ಚ್ ಫೆಸ್ಟಿವಲ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿವಿಧ ಕಡೆಗಳಿಂದ ಯುವಕರು ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.
ಈ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಒಂದು ಪ್ರಮುಖ ಆಚರಣೆಯಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ಇದು ಹೋರಿಗಳೊಂದಿಗೆ ಸೆಣಸಾಡುವ ಅಪಾಯಕಾರಿ ಆಟವಾಗಿದೆ.
ಈ ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ ಸಹ ಸಂಪ್ರದಾಯ ಮುರಿಯಲು ಒಪ್ಪದ ತಮಿಳುನಾಡಿನ ಜನ ಪ್ರತಿವರ್ಷ ಈ ಕ್ರೀಡೆಯನ್ನು ಆಯೋಜಿಸುತ್ತಿದ್ದಾರೆ.












Click it and Unblock the Notifications