ಶಿವಮೊಗ್ಗ: ನಿಷೇಧದ ನಡುವೆಯೂ ಹೋರಿ ಸ್ಪರ್ಧೆ, ಓರ್ವ ಬಲಿ
ಶಿವಮೊಗ್ಗ, ನವೆಂಬರ್ 13: ಜಿಲ್ಲಾಡಳಿತದ ನಿರ್ಬಂಧದ ನಡುವೆ ಶಿವಮೊಗ್ಗ ಜಿಲ್ಲೆಯ ಆಯನೂರು ಕೋಟೆಯಲ್ಲಿ ಸೋಮವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಆಯನೂರು ಕೋಟೆಯಲ್ಲಿ ಸೋಮವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಕುಂಸಿ ಮೂಲದ ಚಂದ್ರಶೇಖರ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಕಳೆದ ವರ್ಷ ಇದೇ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಈ ವರ್ಷ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಆದರೂ ನಿರ್ಬಂಧದ ನಡುವೆ ಆಯನೂರು ಕೋಟೆಯಲ್ಲಿ ಸ್ಪರ್ಧೆ ಆಯೋಜಿಸಲಾದೆ. ಸ್ಪರ್ಧೆ ನೋಡಲು ಬಂದಿದ್ದ ಚಂದ್ರಶೇಖರಗೆ ಹೋರಿ ತಿವಿದಿದೆ.












Click it and Unblock the Notifications