ತಮಿಳುನಾಡು: ಎಂಕೆ ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ

ಚೆನ್ನೈ, ಏಪ್ರಿಲ್ 2: ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅಳಿಯನ ಮನೆ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಬರೀಶನ್ ಒಡೆತನದ ನಾಲ್ಕು ಕಡೆಗಳಲ್ಲಿ ಬೆಳಗ್ಗೆಯಿಂದ ಪರಿಶೀಲನೆ ನಡೆಯುತ್ತಿದೆ. ಹುಡುಕಲಾದ ಸ್ಥಳಗಳಲ್ಲಿ ನೀಲಂಗರೈನಲ್ಲಿರುವ ಮನೆಯು ಕೂಡ ಒಂದು ಅಲ್ಲಿ ಸ್ಟಾಲಿನ್ ಪುತ್ರಿ ಪತಿ ಶಬರೀಶನ್ ಅವರೊಂದಿಗೆ ವಾಸವಾಗಿದ್ದಾರೆ.

ಏಪ್ರಿಲ್ 6 ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನ ಡಿಎಂಕೆ ನಾಯಕರ ವಿರುದ್ಧ ನಡೆದ ಎರಡನೇ ತೆರಿಗೆ ದಾಳಿ ಇದಾಗಿದೆ.

MK Stalin

ಕಳೆದ ತಿಂಗಳು ಡಿಎಂಕೆ ಹಿರಿಯ ನಾಯಕ ಇವಿ ವೇಲು ಅವರ ಮೇಲೆ ಐಟಿ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ರಾಜಕಾರಣಿಯಿಂದ ಹೆಚ್ಚಿನ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಅಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿರುವಣ್ಣಾಮಲೈನಲ್ಲಿರುವ ವೇಲು ಅವರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದರು.
ಎಂಕೆ ಸ್ಟಾಲಿನ್ ಅವರು ರಾಜ್ಯ ಚುನಾವಣೆಗೆ ಪ್ರಚಾರ ಶುರುಮಾಡಿದ ಬೆನ್ನಲ್ಲೇ ಅವರ ಆಸ್ತಿಗಳ ಬಗ್ಗೆ ಇದೀಗ ಶೋಧ ನಡೆದಿದೆ.

ಯಾವ ಡಿಎಂಕೆ ನಾಯಕರ ಮನೆ ಮೇಲೆ ದಾಳಿ ನಡೆಸಿದರೂ ಅಧಿಕಾರಿಗಳಿಗೆ ಏನೂ ಸಿಗುವುದಿಲ್ಲ, ಈ ದಾಳಿಯಿಂದ ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಡಿಎಂಕೆ ಜನರಲ್ ಸೆಕ್ರೆಟರಿ ದುರೈಮುರುಗನ್ ಹೇಳಿದ್ದಾರೆ. ತಮಿಳುನಾಡು ಚುನಾವಣೆಯ ಫಲಿತಾಂಶ ಮೇ 2 ರಂದು ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+