ಚೆನ್ನೈನಲ್ಲಿ ಕುತ್ತಿಗೆಗೆ ಚಾಕುವಿಟ್ಟು ಬೆದರಿಸಿ ಸಾಮೂಹಿಕ ಅತ್ಯಾಚಾರ,ದರೋಡೆ
ಚೆನ್ನೈ, ಜನವರಿ 20: ಕುತ್ತಿಗೆಗೆ ಚಾಕುವಿಟ್ಟು ಬೆದರಿಸಿ ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಮೂರು ಜನರು ಸೇರಿ ಯುವತಿ ಮೇಲೆ ಅತ್ಯಾಚಾರ ನಡೆಸಿ, ಯುವತಿಯ ಸ್ನೇಹಿತನನ್ನು ಥಳಿಸಿರುವುದು ವೆಲ್ಲೂರಿನಲ್ಲಿ ನಡೆದ ಘಟನೆಯಾಗಿದೆ.
ವೆಲ್ಲೂರು ಕೋಟೆಯ ಬಳಿ ಸಂಜೆ ಸುಮಾರು 7 ಗಂಟೆಗೆ ನಡೆದಿದೆ. ಈ ಪ್ರದೇಶ ಚೆನ್ನೈನಿಂದ 140 ಕಿ.ಮೀ ದೂರದಲ್ಲಿದೆ. ಅತ್ಯಾಚಾರವಷ್ಟೇ ಅಲ್ಲದೆ ಯುವತಿ ಹಾಗೂ ಆಕೆಯ ಸ್ನೇಹಿತನ ಬಳಿ ಇದ್ದ ಎಲ್ಲಾ ವಸ್ತುಗಳನ್ನು ದೋಚಿದ್ದಾರೆ.

ಅತ್ಯಾಚಾರ ಮತ್ತು ದರೋಡೆ ಪ್ರಕರಣ ದಾಖಲಾಗಿದೆ. 2018ರಲ್ಲಿ ಪ್ರತಿ 15ನಿಮಿಷಕ್ಕೆ ಒಂದು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ ಎನ್ನುವ ಅಂಕಿಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. 2018ರಲ್ಲಿ ನಡೆದ 34ಸಾವಿರ ಅತ್ಯಾಚಾರ ಪ್ರಕರಣಗಳ ಪೈಕಿ ಕೇವಲ ಶೇ. 85 ರಷ್ಟು ಪ್ರಕರಣಗಳು ಮಾತ್ರ ದಾಖಲಾಗಿವೆ.












Click it and Unblock the Notifications