• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣಾ ವ್ಯವಸ್ಥೆಯಲ್ಲಿ ಶಿಸ್ತು ತಂದ ದಕ್ಷ ಅಧಿಕಾರಿ ಶೇಷನ್ ಇನ್ನಿಲ್ಲ

|

ಚೆನ್ನೈ, ನವೆಂಬರ್ 10: ತಿರುನೆಲ್ಲೈ ನಾರಾಯಣ ಐಯರ್ ಶೇಷನ್(87) ವಿಧಿವಶರಾಗಿದ್ದಾರೆ. ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಶಿಸ್ತು, ಅಭ್ಯರ್ಥಿಗಳ ಭ್ರಷ್ಟತನಕ್ಕೆ ಕಡಿವಾಣ ಹಾಕಿದ್ದ ದಕ್ಷ ಅಧಿಕಾರಿ ಟಿ.ಎನ್ ಶೇಷನ್ ಇಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಭಾರತದ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಶೇಷನ್ ಡಿಸೆಂಬರ್ 12, 1990ರಿಂದ ಡಿಸೆಂಬರ್ 11, 1996 ರ ತನಕ ಕಾರ್ಯ ನಿರ್ವಹಿಸಿದ್ದರು. 1955ರ ಬ್ಯಾಚಿನ ತಮಿಳುನಾಡು ಕೇಡರ್ ನ ಐಎಎಸ್ ಅಧಿಕಾರಿಯಾಗಿ ಶೇಷನ್ ಅವರು 1989ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದಾರೆ. 1996ರಲ್ಲಿ ರಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾದರು.

ಚುನಾವಣೆ ಸಂದರ್ಭದಲ್ಲಿನ ಅಭ್ಯರ್ಥಿಗಳ ದುಂದು ವೆಚ್ಚ, ವೋಟಿಗಾಗಿ ನೋಟು, ಮೀತಿ ಮೀರಿದ ಹಣ ವರ್ಗಾವಣೆಗೆ ಕಡಿವಾಣ ಹಾಕಿದರು. ಚುನಾವಣಾ ಸಂದರ್ಭಗಳಲ್ಲಿ ಎಲ್ಲೆಡೆ ಪ್ರಚಾರಕ್ಕಾಗಿ ಬಳಸುತ್ತಿದ್ದ ಬ್ಯಾನರ್, ಬಟ್ಟಿಂಗ್ಸ್, ಕಟೌಟ್ ಸಂಸ್ಕೃತಿಗೆ ಬ್ರೇಕ್ ಹಾಕಿದವರು ಶೇಷನ್.

ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರುನೆಲ್ಲೈನಲ್ಲಿ 1932ರಲ್ಲಿ ಜನಿಸಿದ ಶೇಷನ್ ಅವರು ಭೌತಶಾಸ್ತ್ರದಲ್ಲಿ ಪದವಿ ಪಡೆದು ಕೆಲ ಕಾಲ ಮದ್ರಾಸ್ ಕ್ರೈಸ್ತ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಐಎಎಸ್ ಪರೀಕ್ಷೆ ಬರೆದು ನಾಗರಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹಾರ್ವಡ್ ವಿವಿಯಲ್ಲಿ ಗಳಿಸಿದ್ದರು.

ಮೈಸೂರಿನಲ್ಲಿ ಶೇಷನ್ ಭಾಷಣದ ಮೆಲುಕು

"ಭಾರತದಲ್ಲಿ 700 ರಾಜಕೀಯ ಪಕ್ಷಗಳಿವೆ. ಒಂದು ಪಕ್ಷ ಯಾವ ಪಕ್ಷದೊಂದಿಗೆ ಬೇಕಾದರೂ ನೆಂಟಸ್ತಿಕೆ ಬೆಳೆಸುತ್ತದೆ. ಈ ನೆಂಟಸ್ತಿಕೆ ಅನುಕೂಲ ಸಿಂಧುತ್ವದ ಫಲಿತಾಂಶವೇ ಹೊರತು ತತ್ತ್ವಗಳ ಮೊತ್ತವಲ್ಲ . ನಮ್ಮ ದೇಶದ ಒಬ್ಬ ಪ್ರಧಾನಿಯನ್ನು ಕೊಂದ ಬಣವೊಂದರ ಸಹೋದರ ಪಕ್ಷದೊಂದಿಗೆ ಯಃಕಶ್ಚಿತ್‌ ಗದ್ದುಗೆ ಆಸೆಗೆ ನೆಂಟಸ್ತಿಕೆ ಬೆಳೆಸುವುದು ಇವತ್ತಿನ ರಾಜಕಾರಣದಲ್ಲಿ ಬಟಾ ಬೆತ್ತಲು. ತಮಿಳುನಾಡಿನ ಎಐಎಡಿಎಂಕೆ- ಕಾಂಗ್ರೆಸ್ಸು- ಪಾಟ್ಟಾಳಿ ಮಕ್ಕಳ್‌ ಕಚ್ಚಿ (ಎಲ್‌ಟಿಟಿಇಗೆ ಅಯ್ಯೋ ಪಾಪ ಅನ್ನುವ ಪಕ್ಷ) ಒಡಂಬಡಿಕೆಯನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌.ಶೇಷನ್‌ ಉದಾಹರಣೆ ಸಮೇತ ತಮ್ಮ ಭಾಷಣದಲ್ಲಿ ಹೇಳಿದ್ದರು."2001ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ 'ಭಾರತದಲ್ಲಿ ರಾಜಕೀಯದ ಸ್ಥಿತಿ- ಗತಿ' ಎಂಬ ವಿಷಯದ ಬಗ್ಗೆ ಮಾತನಾಡಿದ್ದರು.

ಭಾರತದ ರಾಜಕಾರಣ ತತ್ತ್ವಾದರ್ಶ, ದೇಶಭಕ್ತಿ, ಸಹಿಷ್ಣುತೆಯಿಲ್ಲದ ಸ್ವಾರ್ಥ ರಾಜಕಾರಣಿಗಳಿಂದ ತುಂಬಿಹೋಗಿದೆ. ರಾಜಕಾರಣದಿಂದಾಗಿ ಧರ್ಮ ದಾರಿ ತಪ್ಪಿದೆ

ದೇಶ ಎದುರಿಸುತ್ತಿರುವ ಇಂಥ ಗಂಭೀರ ಸಮಸ್ಯೆಗಳನ್ನೂ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬ್ರೂಟಸ್‌ಗಳು ನಮ್ಮಲ್ಲಿದ್ದಾರೆ. ನಾವು ಎಚ್ಚರದಿಂದ ಇರಬೇಕು

ನಿಸ್ವಾರ್ಥ, ದೇಶಭಕ್ತಿ , ಧರ್ಮ ಪರಿಪಾಲನೆ, ಅಭಿವೃದ್ಧಿಗೆ ದೀಕ್ಷೆ ಇವುಗಳನ್ನು ಹೊತ್ತ ಯುವಕರು ರಾಜಕೀಯ ಹೊಕ್ಕಿ, ಅದಕ್ಕೆ ಹೊಸ ರಂಗು ಕೊಡಬೇಕು ಧಾರ್ಮಿಕ ಪ್ರಜ್ಞೆ ಮುಕ್ತಿಗೊಂದು ಮಾರ್ಗ. ಭಾಷೆ ಅಭಿವ್ಯಕ್ತಿಗೊಂದು ಸೇತುವೆ. ರಾಜಕಾರಣಿಗಳಿಗೆ ಇವೇ ಡಿವೈಡ್‌ ಅಂಡ್‌ ರೂಲ್‌ ಅಸ್ತ್ರ ಎಂದು ಭ್ರಷ್ಟರ ಬಗ್ಗೆ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Former Chief Election Commissioner (CEC) of India, Tirunellai Narayana Iyer Seshan(87) passed away today(Nov 10).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X