ವಾರ್ಧಾ ಹೊಡೆತಕ್ಕೆ ನಲುಗಿದ ಐಷಾರಾಮಿ ಹಯಾತ್ ಹೋಟೆಲ್

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 12: ಐಷಾರಾಮಿ ಹೋಟೆಲ್ ಗಳ ಸಮೂಹ ಹೊಂದಿರುವ ಪಂಚತಾರಾ ಹೋಟೆಲ್ ಹಯಾತ್ ಮೇಲೆ ವಾರ್ಧಾ ಚಂಡಮಾರುತ ಸರಿಯಾಗಿ ದಾಳಿ ಮಾಡಿದೆ.

ಹಯಾತ್ ಹೋಟೆಲ್ ನ ಫೈಬಲ್ ಪ್ಯಾನೆಲ್ ಗಳನ್ನು ನಿಮಿಷಗಳಲ್ಲೇ ವಾರ್ಧಾ ಚಿಂದಿ ಚಿಂದಿ ಮಾಡಿದೆ. [ವಿಡಿಯೋ : ವಾರ್ಧಾ ಚಂಡಮಾರುತದ ಅಬ್ಬರ]

Cyclone Vardah rips Hyatt apart in Chennai

ಬಿರುಗಾಳಿ ಹೊಡೆತಕ್ಕೆ ಸಿಲುಕಿ ನಲುಗಿದ ಹಯಾತ್ ಹೋಟೆಲ್ ನ ಪರಿಸ್ಥಿತಿಯನ್ನು ಚೆನ್ನೈನ ನಾಗರೀಕರೊಬ್ಬರು ಧೈರ್ಯಮಾಡಿ ಸೆರೆಹಿಡಿದಿದ್ದಾರೆ. ಐಷಾರಾಮಿ ಹೋಟೆಲ್ ಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿರುವ ಹಯಾತ್ ರೆಜೆನ್ಸಿ ಹೋಟೆಲ್ ಈಗ ನಿರ್ಮಾಣ ಹಂತದಲ್ಲಿರುವ ಕಟ್ಟಡದಂತೆ ಕಾಣಿಸುತ್ತಿದೆ. [ವಾರ್ದಾ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಪಾಕಿಸ್ತಾನ!]

Cyclone Vardah rips Hyatt apart in Chennai

ಚೆನ್ನೈನ ವಿಮಾನ ನಿಲ್ದಾಣದಿಂದ ಸುಮಾರು 15ಕಿ.ಮೀ ದೂರದಲ್ಲಿರುವ ಹಯಾತ್ ಹೋಟೆಲ್ ಸೇರಿದಂತೆ ಅನೇಕ ಕಟ್ಟಡಗಳನ್ನು ವಾರ್ಧಾ ಹಾಳುಗೆಡವಿದೆ. ನಾಲ್ಕು ಸಾವಿರಕ್ಕೂ ಅಧಿಕ ಮರಗಳು, ಹೋರ್ಡಿಂಗ್, ಎಲೆಕ್ಟ್ರಿಕ್ ಕಂಬಗಳನ್ನು ಧರೆಗುರುಳಿಸಿದೆ.

ಅತ್ಯಾಧುನಿಕ ವಿನ್ಯಾಸ ಹೊಂದಿರುವ ಸುಮಾರು 325ಕ್ಕೂ ಅಧಿಕ ಅತಿಥಿ ಕೊಠಡಿಗಳು ಕ್ಲಬ್ ಲಾಂಜ್ ಹೊಂದಿರುವ ಹಯಾತ್ ಹೋಟೆಲಿನಲ್ಲಿ ಇಟಾಲಿಯನ್, ಚೈನೀಸ್ ಸೇರಿದಂತೆ ಹಲವಾರು ಬಗೆಯ ಖಾದ್ಯಗಳು ಲಭ್ಯವಿದೆ.

Cyclone Vardah rips Hyatt apart in Chennai

8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಹೊಟೆಲ್ ನ ವಿನ್ಯಾಸವನ್ನು ಪಟ್ಕಿ ಅಸೋಸಿಯೇಟ್ಸ್ ಮಾಡಿದೆ. ಅಣ್ಣಾ ಸಲೈ ನಲ್ಲಿರುವ ಈ ಹೋಟೆಲ್ ಈಗ ಮತ್ತೊಮ್ಮೆ ತನ್ನ ವೈಭವವನ್ನು ಮೆರೆಯಲು ಕಟ್ಟಡ ವಿನ್ಯಾಸಗಾರರ ಮೊರೆ ಹೋಗಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Severe cyclonic storm Vardha ripped apart Hyatt, a star hotel in Chennai. Heavy winds dismantled fibre panels of the Hyatt building in a matter of minutes.
Please Wait while comments are loading...