ಲಾಟರಿ ಹಗರಣ ಕಿಂಗ್ ಪಿನ್ ಪುತ್ರ ಬಿಜೆಪಿಗೆ ಸೇರ್ಪಡೆ
ಚೆನ್ನೈ, ಜೂ.24: ಒಂದಂಕಿ ಲಾಟರಿ ಹಗರಣದ ಕಿಂಗ್ ಪಿನ್ ಮಾರ್ಟಿನ್ ಅವರ ಪುತ್ರ ಚಾರ್ಲ್ಸ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಕಮಲ ಪಕ್ಷದ ಕೈ ಹಿಡಿದಿದ್ದಾರೆ.
ಮಾರ್ಟಿನ್ ಸೀನಿಯರ್ ಮೇಲೆ ಮಾತ್ರ ಆರೋಪ ಇದೆ, ಮಾರ್ಟಿನ್ ಜ್ಯೂನಿಯರ್ ಅವರು ಅಪ್ಪಟ ನರೇಂದ್ರ ಮೋದಿ ಅವರ ಭಕ್ತ ಹೀಗಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಮಿಳುನಾಡು ಬಿಜೆಪಿ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದೆ.ಅದರೆ, ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥರಾದ ತಮಿಳ್ ಸಾಯಿ ಸೌಂದರ್ ರಾಜನ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. [ಪಾರಿ ಬಾಯ್ಬಿಟ್ಟರೆ ಪೊಲೀಸರಿಗೆ ನಡುಕ]

ಬಿಜೆಪಿ ಸೇರ್ಪಡೆಗಾಗಿ ಚಾರ್ಲ್ಸ್ ಮೂರು ತಿಂಗಳ ಹಿಂದೆ ಪಕ್ಷದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಚಾರ್ಲ್ಸ್ ಅವರ ಸೇರ್ಪಡೆ ಮೂರು ತಿಂಗಳ ಹಿಂದೆಯೇ ಆಗಿರುವ ಸಾಧ್ಯತೆಯಿದೆ ಎಂಬ ಸುದ್ದಿಯಿದೆ. ಅದರೆ, ಚಾರ್ಲ್ಸ್ ಹಾಗೂ ರಾಮ್ ಮಾಧವ್ ಅವರಿರುವ ಚಿತ್ರ ಈಗ ಏಕೆ ಚಾಲ್ತಿಗೆ ಬಂದಿದೆ ಎಂಬ ಪ್ರಶ್ನೆ ಎದ್ದಿದೆ. [ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ]
ಮೋದಿ ಜೊತೆ ವೇದಿಕೆಯಲ್ಲಿ ಲೀಮಾ: ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಸ್ಯಾಂಟಿಯಾಗೋ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಪರ ಕಾರ್ಯಕರ್ತೆಯಾಗಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಐಜೆಕೆ ಕೂಡಾ ಸೇರಿಕೊಂಡಿತ್ತು. [ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು]
ಚುನಾವಣಾ ಪ್ರಚಾರಕ್ಕೆ ತಮಿಳುನಾಡಿನ ಕೊಯಮತ್ತೂರಿಗೆ ನರೇಂದ್ರ ಮೋದಿ ಅವರು ಬಂದಾಗ ಒಂದೇ ವೇದಿಕೆಯಲ್ಲಿ ಲೀಮಾ ರೋಸ್ ಹಾಗೂ ಮೋದಿ ಕಾಣಿಸಿಕೊಂಡಿದ್ದರು. [ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವರ್ಗಾವಣೆ]
ಮಾರ್ಟಿನ್ ಮೇಲೆ ಸರಿ ಸುಮಾರು 14ಕ್ಕೂ ಅಧಿಕ ಪ್ರಕರಣಗಳಿವೆ. ಭೂ ಕಬಳಿಕೆ, ಅಕ್ರಮ ಲಾಟರಿ ದಂಧೆ, ವಂಚನೆ ..ಇತ್ಯಾದಿ, ಡಿಎಂಕೆ ಜೊತೆ ಗೆಳೆತನದಿಂದ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದ ಮಾರ್ಟಿನ್ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಜಾಮೀನು ಪಡೆಯಲು ಮಾರ್ಟಿನ್ ಪತ್ನಿ ಲೀಮಾ ರೋಸ್ ಅವರು ಅಂದಿನ ಸಿಎಂ ಜೆ ಜಯಲಲಿತಾ ಅವರ ಮೊರೆ ಹೊಕ್ಕಿದ್ದರು. ಅದೇನು ಡೀಲ್ ಆಯಿತೋ ಗೊತ್ತಿಲ್ಲ. ಮಾರ್ಟಿನ್ ಮೇಲೆ ಮತ್ತೆ ಪ್ರಕರಣಗಳು ದಾಖಲಾಗಲಿಲ್ಲ. ಕೋರ್ಟ್ ಕೂಡಾ ಜಾಮೀನು ನೀಡಿತು. [7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್]
ಕಿಂಗ್ ಪಿನ್ ಸ್ಯಾಂಟಿಯಾಗೋ ಮಾರ್ಟಿನ್ ಬಳಿ ಪಿಆರ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾರಿ ರಾಜನ್ ಈಗ ಬೆಂಗಳೂರಿನ ಕಾರಾಗೃಹದಲ್ಲಿದ್ದಾರೆ.












Click it and Unblock the Notifications