ಲಾಟರಿ ಕಿಂಗ್ ಪಿನ್ ಕೈ ಹಿಡಿದ ಪುಢಾರಿಗಳ ಗೆಳೆತನ

ಬೆಂಗಳೂರು/ಚೆನ್ನೈ, ಜೂ.1: ಕರ್ನಾಟಕದ ಒಂದಂಕಿ ಲಾಟರಿ ದಂಧೆಯ ತನಿಖೆಯನ್ನು ಸಿಬಿಐಗೆ ಕರ್ನಾಟಕ ಸರ್ಕಾರ ವಹಿಸಿದೆ. ಇದರಿಂದ ತಮಿಳುನಾಡಿನ ಲಾಟರಿ ಹಗರಣದ ಕೇಸುಗಳು ಮತ್ತೆ ಓಪನ್ ಆಗುತ್ತದೆಯೇ? ಈಗಲೇ ಹೇಳಲು ಬರುವುದಿಲ್ಲ. ಅದರೆ, ಕಿಂಗ್ ಪಿನ್ ಗಳಾದ ಮೈಕಲ್ ಹಾಗೂ ಸ್ಯಾಂಟಿಯಾಗೋ ಮಾರ್ಟಿನ್ ವಿಚಾರಣೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ.

ಕಿಂಗ್ ಪಿನ್ ಸ್ಯಾಂಟಿಯಾಗೋ ಮಾರ್ಟಿನ್ ಬಳಿ ಪಿಆರ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾರಿ ರಾಜನ್ ಈಗ ಬೆಂಗಳೂರಿನ ಕಾರಾಗೃಹದಲ್ಲಿದ್ದಾರೆ. ಪಾರಿ ರಾಜನ್ ವಿಚಾರಣೆಗೊಳಪಡಿಸಿದರೆ ಮಾರ್ಟಿನ್ ಹಾಗೂ ಮೈಕಲ್ ಹೆಸರು ಹೊರಬೀಳಬಹುದು. ಬಹುಕೋಟಿ ಒಂದಂಕಿ ಲಾಟರಿ ಹಗರಣದ ಪ್ರಮುಖ ರೂವಾರಿ ಪಾರಿರಾಜನ್‌ನನ್ನು ಬಂಗಾರಪೇಟೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತೆ ಆದೇಶ ಹೊರಡಿಸಿದೆ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲ]

ಪುಢಾರಿಗಳ ಕೈ ಕಾಲು ಹಿಡಿದರೆ ಬಚಾವ್: ಮಾರ್ಟಿನ್ ಮೇಲೆ ಸರಿ ಸುಮಾರು 14ಕ್ಕೂ ಅಧಿಕ ಪ್ರಕರಣಗಳಿವೆ. ಭೂ ಕಬಳಿಕೆ, ಅಕ್ರಮ ಲಾಟರಿ ದಂಧೆ, ವಂಚನೆ ..ಇತ್ಯಾದಿ, ಡಿಎಂಕೆ ಜೊತೆ ಗೆಳೆತನದಿಂದ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದ ಮಾರ್ಟಿನ್ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]

Lottery Kingpin Santiago Martin

ಸೇಲಂ ಠಾಣೆ ಪೊಲೀಸರು 2011ರಲ್ಲಿ ಅರೆಸ್ಟ್ ವಾರೆಂಟ್ ಜೊತೆ ಮಾರ್ಟಿನ್ ಮನೆ ಮುಂದೆ ನಿಂತಾಗ ಈತನಿಗೆ ದಿಕ್ಕೇ ತೋಚದಂತಾಯಿತು. ಕೊಯಮತ್ತೂರಿನ ಸೆಂಟ್ರಲ್ ಜೈಲು ಸೇರಿದ ಮಾರ್ಟಿನ್ ವಿರುದ್ಧ ಈರೋಡಿನ ಕೊಡುಮುಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಲಾಟರಿ ಅವ್ಯವಹಾರ ಪ್ರಕರಣವೇ ಕೊನೆಯದ್ದು ಎನ್ನಬಹುದು. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]

ಜಾಮೀನು ಪಡೆಯಲು ಮಾರ್ಟಿನ್ ಪತ್ನಿ ಲೀಮಾ ರೋಸ್ ಅವರು ಅಂದಿನ ಸಿಎಂ ಜೆ ಜಯಲಲಿತಾ ಅವರ ಮೊರೆ ಹೊಕ್ಕಿದ್ದರು. ಅದೇನು ಡೀಲ್ ಆಯಿತೋ ಗೊತ್ತಿಲ್ಲ. ಮಾರ್ಟಿನ್ ಮೇಲೆ ಮತ್ತೆ ಪ್ರಕರಣಗಳು ದಾಖಲಾಗಲಿಲ್ಲ. ಕೋರ್ಟ್ ಕೂಡಾ ಜಾಮೀನು ನೀಡಿತು. [ಪಾರಿ ಬಾಯ್ಬಿಟ್ಟರೆ ಪೊಲೀಸರಿಗೆ ನಡುಕ]

Kingpin Santiago Martin and his wife Leemarose

ಭೂ ವಿವಾದ ಪ್ರಕರಣದಲ್ಲೂ ಮದ್ರಾಸ್ ಹೈಕೋರ್ಟಿನಿಂದ ಜಾಮೀನು ಪಡೆದುಕೊಂಡ ಮಾರ್ಟಿನ್, ಗೂಂಡಾ ಕಾಯ್ದೆ ಹಿಡಿತಕ್ಕೂ ಸಿಗಲಿಲ್ಲ. ಡಿಎಂಕೆ ಹಾಗೂ ಎಐಎಡಿಎಂಕೆ ರಾಜಕೀಯ ಲಾಭಕ್ಕೆ ದಾಳವಾಗಿ ನನ್ನ ಪತಿ ಬದುಕು ನಾಶವಾಯಿತು ಎಂದು ಲೀಲಾ ರೋಸ್ ಆರೋಪಿಸಿದರು. [ಲಾಟರಿ ಹಗರಣ ಸಿಬಿಐ ತನಿಖೆಗೆ : ಯಾರು, ಏನು ಹೇಳಿದರು?]

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಪುತ್ರಿ ಸೆಲ್ವಿ(ಬೆಂಗಳೂರಿನ ನಿವಾಸಿ) ಕೂಡಾ ತನ್ನ ಪತಿಯನ್ನು ಜೈಲಿಗೆ ಕಳುಹಿಸಲು ಯತ್ನಿಸಿದ್ದಾರೆ ಎಂದು ಲೀಮಾ ಆರೋಪಿಸಿದರು.

Lottery Kingpin Santiago Martin
ಮೋದಿ ಜೊತೆ ಕಾಣಿಸಿಕೊಂಡಿದ್ದ ಲೀಮಾ: ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಲೀಮಾ ರೋಸ್ ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಪರ ಕಾರ್ಯಕರ್ತೆಯಾಗಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಐಜೆಕೆ ಕೂಡಾ ಸೇರಿಕೊಂಡಿತ್ತು. [ಮಟ್ಕಾ: ಯಾವ ನಂಬರು ಇವತ್ತಿಗೆ ಫಿಟ್ ಆಗುತ್ತದೆ?]

ಚುನಾವಣಾ ಪ್ರಚಾರಕ್ಕೆ ತಮಿಳುನಾಡಿಗೆ ನರೇಂದ್ರ ಮೋದಿ ಅವರು ಬಂದಾಗ ಒಂದೇ ವೇದಿಕೆಯಲ್ಲಿ ಲಾಟರಿ ಕಿಂಗ್ ಪಿನ್ ಮಾರ್ಟಿನ್ ಪತ್ನಿ ಲೀಮಾ ರೋಸ್ ಹಾಗೂ ಮೋದಿ ಕಾಣಿಸಿಕೊಂಡಿದ್ದರು.

ಸುಮಾರು 7,000 ಕೋಟಿ ರು ಗೂ ಅಧಿಕ ಮೌಲ್ಯ ಲಾಟರಿ ಹಗರಣದಲ್ಲಿ ಸಿಕ್ಕಿಂ ಸರ್ಕಾರಕ್ಕೆ ಸುಮಾರು 4,500 ಕೋಟಿ ರು ನಷ್ಟವಾಗಿದೆ ಎಂದು ಸಿಬಿಐ ಹೇಳಿದೆ. ಕರ್ನಾಟಕದ ಸಿಬಿಐ ತನಿಖೆ ಈಗ ಮತ್ತೊಮ್ಮೆ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳ ಲಾಟರಿ ದಂಧೆ ಕಿಂಗ್ ಪಿನ್ ಗಳತ್ತ ಕೂಡಾ ಕ್ಷ ಕಿರಣ ಬೀರುವ ಸಾಧ್ಯತೆ ನಿಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+