ಐಟಿ ದಾಳಿಯಾಗಿದ್ದ ತ.ನಾಡು ಸಚಿವ ವಿಜಯ್ ಭಾಸ್ಕರ್ ಸಹವರ್ತಿ ಶವವಾಗಿ ಪತ್ತೆ

ತಮಿಳುನಾಡಿನ ಸಚಿವ ವಿಜಯ್ ಭಾಸ್ಕರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯಾದ ಒಂದು ತಿಂಗಳಿಗೆ ಸಚಿವರ ಆಪ್ತ ಸುಬ್ರಮಣಿಯಂ ಶವ ನಾಮಕ್ಕಲ್ ನಲ್ಲಿ ಶವವಾಗಿ ಪತ್ತೆಯಾಗಿದೆ. ಅವರು ಸಚಿವರ ವ್ಯವಹಾರ ಪಾಲುದಾರರಾಗಿದ್ದಾರು ಎನ್ನಲಾಗುತ್ತಿದೆ

ಚೆನ್ನೈ, ಮೇ 8: ತಮಿಳುನಾಡಿನ ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಅವರ ಸಹವರ್ತಿ ಶವ ಸೋಮವಾರ ನಾಮಕ್ಕಲ್ ನಲ್ಲಿ ಪತ್ತೆಯಾಗಿದೆ. ಸುಬ್ರಮಣಿಯಂ ಮೃತರು. ಅವರ ಶವ ಫಾರ್ಮ್ ಹೌಸ್ ನಲ್ಲಿ ಪತ್ತೆಯಾಗಿದೆ. ವಿಜಯ್ ಭಾಸ್ಕರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಸುಬ್ರಮಣಿಯಂ ಮೇಲೆ ಕೂಡ ಐಟಿ ದಾಳಿ ನಡೆದಿತ್ತು.

ಮೊದಲಿಗೆ ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿತ್ತು. ಆದರೆ ಸುಬ್ರಮಣಿಯಂ ಕುಟುಂಬದವರ ಪ್ರಕಾರ ಹೃದಯ ಸ್ಥಂಭನದಿಂದ ಅವರು ಮೃತಪಟ್ಟಿದ್ದಾರೆ. ಸರಕಾರಿ ಕಾಂಟ್ರ್ಯಾಕ್ಟರ್ ಆಗಿದ್ದ ಅವರು ತಮಿಳುನಾಡು ಸಚಿವ ವಿಜಯ್ ಭಾಸ್ಕರ್ ಗೆ ವ್ಯವಹಾರ ಪಾಲುದಾರರು ಎನ್ನಲಾಗಿದೆ.[ತಮಿಳುನಾಡಿನ ಹಲವೆಡೆ ಐಟಿ ದಾಳಿ: ಶಶಿಕಲಾ ಆಪ್ತ, ನಟ ಶರತ್ ಕುಮಾರ್ ಮನೆ ರೇಡ್]

Chennai IT raids: Vijaya Bhaskar's aide found dead in Namakkal

ವಿಜಯ್ ಭಾಸ್ಕರ್ ಗೆ ಸೇರಿದ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಕೂಡ ಅವರು ಸಹಾಯ ಮಾಡಿದ್ದರು. ನಿರ್ಮಾಣ ಕಾರ್ಯದ ಗುತ್ತಿಗೆ ಜತೆಗೆ ವಿಜಯ್ ಭಾಸ್ಕರ್ ರ ಜತೆಗೆ ಹಲವು ವ್ಯವಹಾರಗಳಲ್ಲಿ ಭಾಗೀದಾರರಾಗಿದ್ದರು ಎಂಬ ಶಂಕೆ ಇದೆ. ಸುಬ್ರಮಣಿಯಂಗೆ ಸೇರಿದ ಆಸ್ತಿಗಳ ಮೇಲೆ ಕೂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.[ಶರತ್ ಕುಮಾರ್ ಆಯ್ತು, ಅವರ ಪತ್ನಿ ರಾಧಿಕಾ ಕಚೇರಿ ಮೇಲೆ ಐಟಿ ದಾಳಿ]

ದಾಳಿ ಸಂದರ್ಭದಲ್ಲಿ ವಿಜಯ್ ಭಾಸ್ಕರ್ ಗೆ ನಂಟಿದೆ ಎನ್ನಲಾದ ಹಾಗೂ ಸುಬ್ರಮಣಿಯಂ ಸುಪರ್ದಿಯಲ್ಲಿರುವ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದಾಯ ತೆರಿಗೆ ದಾಳಿ ನಡೆದ ಒಂದು ತಿಂಗಳ ನಂತರ ಸುಬ್ರಮಣಿಯಂ ಅವರು ಶವವಾಗಿ ಪತ್ತೆಯಾಗಿದ್ದಾರೆ. ನಾಮಕ್ಕಲ್ ಸರಕಾರಿ ಆಸ್ಪತ್ರೆಗೆ ಶವವನ್ನು ಸ್ಥಳಾಂತರಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+