ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಬಾಗಿಲು ತೆರೆದ ಅಮೆರಿಕ
ಚೆನ್ನೈ, ಜೂನ್ 09 : ಅಮೆರಿಕದಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂದು ಕನಸು ಕಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ರಾಯಭಾರ ಕಚೇರಿ ಮತ್ತು ದೂತಾವಾಸದಲ್ಲಿ ವೀಸಾ ಹೆಬ್ಬಾಗಿಲನ್ನು ಗುರುವಾರ ತೆರೆಯಲಾಗಿದೆ.
ಹೊಸದಿಲ್ಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿ ಹಾಗೂ ಚೆನ್ನೈ, ಹೈದರಾಬಾದ್, ಕೋಲ್ಕೊತಾ ಮತ್ತು ಮುಂಬೈಯಲ್ಲಿನ ದೂತಾವಾಸ ಕಚೇರಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕೆ ತೆರಳಲು ಸನ್ನದ್ಧರಾಗಿ ವೀಸಾಕ್ಕಾಗಿ ಅರ್ಜಿಸಲ್ಲಿಸಿರುವ 4000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಸಂದರ್ಶನಕ್ಕೆ ಕರೆ ನೀಡಿದ್ದವು.[ಯುಎಸ್ ವೀಸಾ: ಭಾರತಕ್ಕೆ ಶೇ. 28 ಹೆಚ್ಚಳ, ಪಾಕ್ ಗೆ ಶೇ. 40 ಖೋತ]
ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಮೂಹಕ್ಕೆ ಮತ್ತಷ್ಟು ವಿದ್ಯಾರ್ಥಿಗಳ ಸೇರ್ಪಡೆಯ ಸಂದರ್ಭವನ್ನು ಹೊಸದಿಲ್ಲಿಯಲ್ಲಿ ಶಾರ್ಜೆ ಡಿ ಅಫೇರ್ಸ್ ಮೇರಿ ಕೇ ಕಾರ್ಲ್ಸ್‌ಸನ್ ಮತ್ತು ಭಾರತದಲ್ಲಿರುವ ದೂತಾವಾಸ ಕಚೇರಿಗಳಲ್ಲಿನ ಕಾನ್ಸಲ್ ಜನರಲ್‌ಗಳು ಸಂಭ್ರಮದಿಂದ ಆಚರಿಸಿದರು.
'ಸ್ಟೂಡೆಂಟ್ ವೀಸಾ ಡೇ' ಅಂಗವಾಗಿ ರಾಯಭಾರ ಕಚೇರಿ ಮತ್ತು ದೂತಾವಾಸಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕ ವಿವಿಗಳಿಂದ ಇತ್ತೀಚೆಗೆ ಪದವಿ ಪಡೆದವರು ತಮ್ಮ ಅನುಭವ ಹಂಚಿಕೊಂಡರು. EducationUSA ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.(PHOTO CREDIT: U.S. Consulate General Chennai)

ಹೆಚ್ಚಿನ ಮೌಲ್ಯ ನೀಡುವ ವಿಶ್ವವಿದ್ಯಾಲಯಗಳು
"ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಂದಾಗಿ ಕ್ಯಾಂಪಸ್ ಮತ್ತು ತರಗತಿಗಳಿಗೆ ಒದಗುವ ಸಾಂಸ್ಕೃತಿಕ ವೈವಿಧ್ಯ, ವಿಭಿನ್ನ ದೃಷ್ಟಿಕೋನ ಮತ್ತು ಅನುಭವಗಳಿಗೆ ಅಮೆರಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಹೆಚ್ಚಿನ ಮೌಲ್ಯ ನೀಡುತ್ತವೆ," ಎಂದು ಚೆನ್ನೈ ದೂತಾವಾಸ ಕಚೇರಿಯ ಆಕ್ಟಿಂಗ್ ಕೌನ್ಸಲ್ ಜನರಲ್ ಡೆಬಿ ರಾಬಿನ್‌ಸನ್ ಹೇಳಿದರು.[ಎಚ್ 1ಬಿ ವೀಸಾ ಕೇಳಿದರೆ, 15 ವರ್ಷಗಳ ಹಿಂದಿನ ಜೀವನ ಜಾಲಾಡ್ತಾರೆ!]

ಪ್ರತಿ ಆರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಒಬ್ಬ ಭಾರತೀಯ
ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 166,000 ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ಅವರ ಸಂಖ್ಯೆ 100,000ದಷ್ಟಿತ್ತು. "ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರತಿ ಆರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಯಿರುತ್ತಾನೆ. ತಮ್ಮ ಸುತ್ತಮುತ್ತಲಿನ ಸಮುದಾಯ ಮತ್ತು ವಿಶ್ವವಿದ್ಯಾಲಯದ ಏಳಿಗೆಗೆ ಈ ವಿದ್ಯಾರ್ಥಿಗಳು ನೀಡುತ್ತಿರುವ ಕೊಡುಗೆ ಅಪಾರ" ಎಂದು ಶಾರ್ಜೆ ಡಿ ಅಫೇರ್ಸ್ ಕಾರ್ಲ್‌ಸನ್ ಹೇಳಿದರು.

ವಿದ್ಯಾರ್ಥಿಗಳ ಜೀವನವನ್ನೇ ಬದಲಿಸುವ ವಿವಿಗಳು
ಕಾರ್ಲ್‌ಸನ್ ಅವರು ಇತ್ತೀಚೆಗೆ ಬರೆದ ಲೇಖನ "When You Learn with Us"ದಲ್ಲಿ "ಅಮೆರಿಕದ ವಿವಿಗಳಿಂದ ಪ್ರವೇಶದ ಕರೆ ಪಡೆದ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಅಮೆರಿಕದಲ್ಲಿನ ಮುಕ್ತ, ಲವಲವಿಕೆ ತುಂಬಿದ ಅತ್ಯುತ್ತಮ ಕ್ಯಾಂಪಸ್ಸುಗಳಲ್ಲಿನ ಅನುಭವ ನಿಮ್ಮ ಜೀವನವನ್ನೇ ಬದಲಿಸಲಿದೆ. ಭಾರತದ ಪ್ರಮುಖ ರಾಜಕಾರಣಿಗಳು, ಉದ್ಯಮಪತಿಗಳು, ಕಲಾವಿದರು, ಶೈಕ್ಷಣಿಕ ತಜ್ಞರು, ವಿಜ್ಞಾನಿಗಳು ಮತ್ತು ನಟರು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಓದಿದವರೇ" ಎಂದು ಬರೆದಿದ್ದರು.

ಸ್ಟೂಡೆಂಟ್ ವೀಸಾ ಡೇ
ಭಾರತ ಅಮೆರಿಕ ನಡುವಿನ ಶೈಕ್ಷಣಿಕ ಸಂಬಂಧವನ್ನು ಸಂಭ್ರಮಿಸಲು ಪ್ರತಿವರ್ಷ ಜೂನ್ ತಿಂಗಳಲ್ಲಿ 'ಸ್ಟೂಡೆಂಟ್ ವೀಸಾ ಡೇ' ಆಚರಿಸಲಾಗುತ್ತದೆ. ಚೆನ್ನೈನ ಅಮೆರಿಕನ್ ಸೆಂಟರ್ ನಲ್ಲಿ ಗುರುವಾರ ನಡೆದ ಸ್ಟೂಡೆಂಟ್ ವೀಸಾ ಡೇಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದ ನಡೆಸುತ್ತಿರುವ ಚೆನ್ನೈ ದೂತಾವಾಸ ಕಚೇರಿಯ ಆಕ್ಟಿಂಗ್ ಕೌನ್ಸಲ್ ಜನರಲ್ ಡೆಬಿ ರಾಬಿನ್ಸನ್.(PHOTO CREDIT: U.S. Consulate General Chennai)
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications