• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ತಾರತಮ್ಯ:ಮೋದಿಗೆ ಐಐಟಿ ಮದ್ರಾಸ್ ಪ್ರಾಧ್ಯಾಪಕರ ಪತ್ರ

|
Google Oneindia Kannada News

ಚೆನ್ನೈ, ಫೆಬ್ರವರಿ 5: ತಮ್ಮ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಕುರಿತು ಐಐಟಿ ಮದ್ರಾಸ್ ಪ್ರಾಧ್ಯಾಪಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಐಐಟಿ ಮದ್ರಾಸ್‌ನ ಸಹಾಯಕ ಪ್ರಾಧ್ಯಾಪಕ ವಿಪಿನ್ ಪಿ ವೀಟಿಲ್ ಅವರು ಪ್ರತಿಷ್ಠಿತ ಸಂಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯ ನಿರಂತರ ಸಮಸ್ಯೆಯಾಗಿದೆ ಎಂದು ಅವರು ದೂರಿದ್ದಾರೆ.

ವೀಟಿಲ್ ಅವರು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೂ ಒತ್ತಾಯಿಸಿದ್ದರು, ಈ ಜಾತಿ ಆಧಾರಿತ ತಾರತಮ್ಯ ತೊಡೆದುಹಾಕದಿದ್ದರೆ, ಫೆ.24ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ನಮ್ಮ ಈ ನೆಲದಿಂದ ಜಾತಿ ತಾರತಮ್ಯವನ್ನು ತೊಡದುಹಾಕಲು ನೀವು ಸಹಾಯ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ಫೆಬ್ರವರಿ 3ರಂದು ಮೋದಿಗೆ ಪತ್ರ ಬರೆದಿದ್ದರು.

ಐಐಟಿ ಮದ್ರಾಸ್ ಅಧ್ಯಾಪಕರು ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳಿಗೆ ಬೋಧನಾ ಹುದ್ದೆಗಾಗಿ ನಡೆಯುತ್ತಿರುವ ನೇಮಕಾತಿ ಅಭಿಯಾನವನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಐಐಟಿ ಮದ್ರಾಸ್‌ನಲ್ಲಿ ಎಸ್‌ಸಿ ಎಸ್‌ಟಿ ಒಬಿಸಿ ಅಧ್ಯಾಪಕರಿಗಾಗಿ ನಡೆಯುತ್ತಿರುವ ವಿಶೇಷ ನೇಮಕಾತಿಯ ಪ್ರಕ್ರಿಯೆಯನ್ನು ಸರ್ಕಾರ ವಿಶೇಷ ಗಮನಕೊಟ್ಟು ಬಗೆಹರಿಸಬೇಕು ಎಂದರು.

English summary
Vipin K. Veetil, a former assistant professor at the Indian Institute of Technology Madras, has written to Prime Minister Narendra Modi seeking a re-investigation into alleged discrimination against him at the Institute on the basis of caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X