ವಧು ಪಾನಿಪುರಿ ಪ್ರಿಯೆ: ಮುಂದೆ ನಡೆದಿದ್ದೆಲ್ಲಾ ಇತಿಹಾಸ, ವೈರಲ್

ಚೆನ್ನೈ, ಜುಲೈ 10: ಉಳ್ಳವರ ಕುಟುಂಬದ ಮದುವೆಗಳು ಅದ್ದೂರಿಯಾಗಿ ಇರುವುದು ಒಂದು ಕಡೆಯಾದರೆ, ಮದುವೆಯಲ್ಲಿನ ಖಾದ್ಯಗಳು ಕೂಡಾ ತರಹೇವಾರಿಯಾಗಿ ಇರುತ್ತದೆ. ಇದು ಕೆಲವರಿಗೆ ಪ್ರತಿಷ್ಠೆಯ ವಿಚಾರವೂ ಕೂಡಾ..

ಕೋವಿಡ್ ನಿಯಮದಿಂದಾಗಿ ಅದ್ದೂರಿಯಾಗಿ ಮದುವೆ ನಡೆಸಲು ಸರಕಾರ ಅನುಮತಿ ನೀಡದೇ ಇರುವುದರಿಂದ, ಸೀಮಿತ ಆಹ್ವಾನಿತರೊಂದಿಗೆ, ವಿಶಿಷ್ಟವಾಗಿ ವಿಭಿನ್ನವಾಗಿ ಮದುವೆಯನ್ನು ಹೇಗೆ ಆಚರಿಸಿಕೊಳ್ಲಬಹುದು ಎನ್ನುವುದನ್ನು ಚೆನ್ನೈನ ಕುಟುಂಬವೊಂದು ತೋರಿಸಿಕೊಟ್ಟಿದೆ.

ರಸ್ತೆಬದಿಯಲ್ಲಿ ಸಿಗುವ ಪಾನಿಪುರಿ, ಗೋಲ್ಗಪ್ಪಾ ಯಾರಿಗೆ ಇಷ್ಟವಿಲ್ಲ ಹೇಳಿ.. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಇದು ಪಂಚಪ್ರಾಣ. ಮದುವೆ ಸಮಾರಂಭದಲ್ಲಿ ಇದು ಕಂಪಲ್ಸರಿಯಾಗಿ ಇದ್ದೇ ಇರುತ್ತದೆ. ತಮಿಳುನಾಡಿನ ಕುಟುಂಬವೊಂದು ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

Chennai: Bride wears crown and garland made of Pani Puri and Golgappa; Video Goes viral on social media

ವಧುವಿನ ಹೆಸರು ಅಕ್ಷಯಾಗೆ ಗೋಲ್ಗಪ್ಪಾ ಬಹಳ ಇಷ್ಟವಾದ ತಿಂಡಿ. ತನಗೆ ಇಷ್ಟವಾದ ತಿಂಡಿಗೆ ಪ್ರೀತಿ ತೋರಿಸಲು ಈಕೆ ಪುರಿಯಿಂದ ಮಾಡಿದ ಹಾರವನ್ನೇ ಮದುವೆಗೆ ಹಾಕಿಕೊಂಡು ವಿಶಿಷ್ಟತೆ ಮೆರೆದಿದ್ದಾಳೆ.

ಇಷ್ಟೇ ಅಲ್ಲದೇ, ಕಿರೀಟದ ರೀತಿಯಲ್ಲಿ ಪುರಿಯನ್ನು ಜೋಡಿಸಿ ತಲೆಗೆ ಹಾಕಿಕೊಂಡಿದ್ದಾಳೆ. ಈಕೆಗೆ ಇದನ್ನು ಮೇಕಪ್ ಮಾಡಿದ ಆರತಿ ಬಾಲಾಜಿ ಈ ವಿಡಿಯೋ ಮತ್ತು ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

"ನನ್ನ ಸುಂದರ ವಧು ಅಕ್ಷಯ ಮತ್ತು ನನ್ನ ವರ ಅಭಿಷೇಕ್ ಅವರಿಗೆ ಅನೇಕ ಅಭಿನಂದನೆಗಳು. ಈ ಮೇಕ್ಅಪ್ ಅನ್ನು ಮುಂಜಾನೆ 3 ಗಂಟೆಗೆ ಮಾಡಲಾಗಿದ್ದು, ಈ ವಿಡಿಯೋವನ್ನು ಮಧ್ಯಾಹ್ನ 3 ಗಂಟೆಗೆ ಚಿತ್ರೀಕರಿಸಲಾಗಿದೆ" ಎಂದು ಮೇಕಪ್ ಮಾಡಿದ ಆರತಿ ಬಾಲಾಜಿ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು 45 ಲಕ್ಷ ಜನ ವೀಕ್ಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+