ಮೈಮೇಲಿನ ಮಚ್ಚೆಗಳನ್ನು ನಟ ಧನುಷ್ ಅಳಿಸಿಕೊಂಡಿದ್ದೇಕೆ?

Posted By:
Subscribe to Oneindia Kannada

ಚೆನ್ನೈ, ಮಾರ್ಚ್ 21: ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ನಟ ಧನುಷ್ ಅವರ ಅಪ್ಪ ಅಮ್ಮ ಯಾರು ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಧನುಷ್ ಅವರ ಮೈಮೇಲೆ ಹುಟ್ಟಿನಿಂದ ಮೂಡಿರುವ ಮಚ್ಚೆಗಳ ಕುರಿತು ಪರಿಶೀಲನೆ ನಡೆಸಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಹುಟ್ಟಿದಾಗಿನಿಂದ ಬಂದಿರುವ ಮಚ್ಚೆಗಳನ್ನು ನಟ ಧನುಷ್ ತೆಗೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಧನುಷ್ ಮೈಮೇಲಿನ ಮಚ್ಚೆಗಳ ಬಗ್ಗೆ ಪರೀಕ್ಷೆ ನಡೆಸಲು ಮಧುರೈ ಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಕೂಡಾ ಇದೆ ಸಮ್ಮತಿಸಿತ್ತು. ಮಧುರೈ ರಾಜಾಜಿ ಸರ್ಕಾರಿ ಆಸ್ಪತ್ರೆ ವೈದ್ಯರು ಧನುಷ್ ಮೈಮೇಲಿನ ಮಚ್ಚೆ ಪರಿಶೀಲಿಸಿ ಸೋಮವಾರ ಕೋರ್ಟಿಗೆ ರಿಪೋರ್ಟ್ ಸಲ್ಲಿಸಲಾಗಿದೆ.[ಧನುಷ್ ಜನ್ಮ ರಹಸ್ಯ ಕಥೆ]

Birthmarks removed from Dhanush's body, suggest medical reports

ಕದಿರೇಷನ್ ದಂಪತಿ ಹೇಳಿದಂತೆ ಧನುಷ್‌ ಮೈ ಮೇಲೆ ಮಚ್ಚೆ ಇಲ್ಲ. ಆದರೆ, ಧನುಷ್ ಕೆಲ ಮಚ್ಚೆಗಳನ್ನು ಲೇಸರ್ ಚಿಕಿತ್ಸೆ ಮೂಲಕ ಅಳಿಸಿ ಹಾಕಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮುಂದಿನ ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಲಾಗಿದೆ. ಇ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Madras High Court on Monday closely examined a medical report on the disputed parentage of popular actor Dhanush, filed in reply to a couple's plea claiming him to be their run-away son and seeking maintenance from him.
Please Wait while comments are loading...