ದೆಹಲಿ, ಉತ್ತರ ಪ್ರದೇಶ ಆಯ್ತು, ಈಗ ಪಂಜಾಬ್‌ನಲ್ಲೂ ಮಾಸ್ಕ್‌ ಕಡ್ಡಾಯ

ಚಂಡೀಘರ್, ಏಪ್ರಿಲ್ 21 : ದೆಹಲಿ, ಉತ್ತರ ಪ್ರದೇಶ, ಹರಿಯಾಣದ ಆದ ನಂತರ ಈಗ ಪಂಜಾಬ್‌ನಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಗುರುವಾರ ಪಂಜಾಬ್‌ ಸರ್ಕಾರ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಿದೆ.

ದೇಶದಲ್ಲಿ ನಾಲ್ಕನೇ ಅಲೆ ಭೀತಿ ಹೆಚ್ಚಾಗಿರುವ ನಡುವೆಯೇ ಹಲವು ರಾಜ್ಯಗಳಲ್ಲಿ ಕೊರೊನಾ ಕೇಸ್‌ಗಳು ದಿನೇ ದಿನೇ ದ್ವಿಗುಣವಾಗ್ತಿದೆ. ಈಗಾಗಲೇ ದೆಹಲಿ, ಉತ್ತರ ಪ್ರದೇಶದಲ್ಲಿ ಕೊರೊನಾ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಮತ್ತೆ ಕೊರೊನಾ ನಿಯಮಗಳನ್ನ ಜಾರಿಗೆ ತರಲಾಗಿದೆ. ಈಗ ಈ ಸಾಲಿಗೆ ಪಂಜಾಬ್‌ ಕೂಡ ಸೇರಿದ್ದು, ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಅಂತ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ ಇನ್ನು ಮುಂದೆ ಸಾರ್ವಜನಿಕ ಬಸ್‌, ರೈಲು, ವಿಮಾನಗಳ, ಟ್ಯಾಕ್ಸಿಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಉಳಿದಂತೆ ಸಿನಿಮಾ ಹಾಲ್, ಶಾಂಪಿಗ್ ಮಾಲ್, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರ ಎಲ್ಲಾ ಅಂಗಡಿಗಳು ಹಾಗೂ ಶಾಲಾ ತರಗತಿ, ಸರ್ಕಾರಿ ಕಚೇರಿ, ಎಲ್ಲಾ ಕಡೆ ಮಾಸ್ಕ್‌ ಹಾಕುವುದನ್ನ ಕಡ್ಡಾಯಗೊಳಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹವರಿಗೆ ಕಠಿಣ ಕಾನನು ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಎಚ್ಚರಿಸಿದೆ.

Face Masks Mandatory in Punjab Again Amid Rising COVID-19 Cases

ಇತ್ತೀಚಿಗೆ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಸರ್ಕಾರಗಳು ಸಹ ಕೊರೊನಾ ಕೇಸ್ ಹೆಚ್ಚಾಗುತ್ತಿರುವುದಕ್ಕೆ ಮುಂಜಾಗೃತ ಕ್ರಮವಾಗಿ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಸೋಂಕು ನಿಯಂತ್ರಿಸಲು ಮುಂದಾಗಿದೆ. ಅಲ್ಲದೆ ದೆಹಲಿ ಆಡಳಿತ ಮಾಸ್ಕ್ ಧರಿಸದಿದ್ದರೆ 500 ರೂ ದಂಡ ಹಾಕಲಾಗುತ್ತದೆ ಅಂತ ಹೇಳಿದೆ.

Face Masks Mandatory in Punjab Again Amid Rising COVID-19 Cases

ಸದ್ಯ ದೇಶದಲ್ಲಿ ಹೊಸದಾಗಿ 2,380 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಸದ್ಯ ದೇಶದಲ್ಲಿ 13,433 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಹೆಚ್ಚಾಗಿ ದೆಹಲಿ, ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಕಂಡು ಬಂದಿದೆ. ಇನ್ನು ಪಂಜಾಬ್‌ ಹೊಸದಾಗಿ 30 ಕೇಸ್‌ಗಳು ಪತ್ತೆಯಾಗಿದೆ. ಒಟ್ಟು ರಾಜ್ಯದಲ್ಲಿ 7, 59,334 ಮಂದಿ ಕೊರೊನಾಗೆ ತುತ್ತಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+