ಸರ್ಕಾರಿ ಆಸ್ಪತ್ರೆಯ ಕಸದ ತೊಟ್ಟಿ ಬಳಿ 6 ತಿಂಗಳ ಭ್ರೂಣ ಪತ್ತೆ
ಪಟಿಯಾಲಾ, ಜನವರಿ 2: ಆರು ತಿಂಗಳ ಗಂಡು ಭ್ರೂಣವು ಪಟಿಯಾಲಾದ ಸರ್ಕಾರಿ ಆಸ್ಪತ್ರೆಯ ಡಸ್ಟ್‌ಬಿನ್‌ನಲ್ಲಿ ಪತ್ತೆಯಾಗಿದೆ.
ಆಸ್ಪತ್ರೆಗೆ ಹೆರಿಗೆಗೆಂದು ಎಷ್ಟು ಮಂದಿ ದಾಖಲಾಗಿದ್ದರು, ಆಸ್ಪತ್ರೆಯ ವೈದ್ಯರಾದ ಸಾಮುಯೆಲ್ ಮೈಕೇಲ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯ ತ್ಯಾಜ್ಯವನ್ನು ಚೆಲ್ಲುವ ಪ್ರದೇಶದಲ್ಲಿ ಭ್ರೂಣವನ್ನು ನಾಯಿಗಳು ತಿನ್ನುತ್ತಿರುವುದನ್ನು ನೋಡಿದ್ದ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಸದ ತೊಟ್ಟಿ ಬಳಿಯೇ ಭ್ರೂಣಕ್ಕೆ ಬೆಂಕಿ ಹಚ್ಚಲಾಗಿತ್ತು.

ಆದರೆ ನಾಯಿಗಳು ಅದನ್ನು ಎಳೆದು ತಿಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರು ತಿಂಗಳ ಭ್ರೂಣವನ್ನು ಪೋಸ್ಟ್‌ಮಾರ್ಟಮ್ ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications