1ನೇ ತರಗತಿ ಬಾಲಕ ಅತ್ಯಾಚಾರ ಆರೋಪಿಯೇ?
ಚಂಡೀಗಢ, ಸೆಪ್ಟೆಂಬರ್ 4: ಒಂದನೇ ತರಗತಿ ಬಾಲಕನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ.
ಒಂದನೇ ತರಗತಿಯ ಬಾಲಕನ ವಿರುದ್ಧ ಹರ್ಯಾಣ ಪೊಲೀಸರು ಅತ್ಯಾಚಾರ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಮೂರು ದಿನಗಳ ಹಿಂದೆ ಸಿರ್ಸಾ ಜಿಲ್ಲೆಯ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂಬ ತಾಯಿಯ ದೂರಿನ ಮೇರೆಗೆ ಡಿಎಸ್‌ಪಿ ರಮೇಶ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ತನ್ನ ಸಹೋದರ ಸಂಬಂಧಿಗಳ ಜೊತೆ ಸರ್ಕಾರಿ ಶಾಲೆಗೆ ಹೋಗಿ ಬರುವಾಗ ಮನೆಗೆ ಅಳುತ್ತಾ ಬಂದಿದ್ದಾಳೆ. ತಾಯಿ ಬಾಲಕನೊಬ್ಬ, ಬಾಲಕಿಗೆ ಕಿರುಕುಳ ನೀಡಿದ್ದಾನೆಂದು ಶಂಕಿಸಿ ಆರೋಪಿಸಿದ್ದಾರೆ.

ಪೊಲೀಸರು ಆಸ್ಪತ್ರೆಯಲ್ಲಿರುವ ಬಾಲಕಿಗೆ ಶಾಲಾ ಹುಡುಗರ ಚಿತ್ರವನ್ನು ತೋರಿಸಿ ಆರೋಪಿಯನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದು, ಗ್ರಾಮಸ್ಥರು ಶಾಲೆಯ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಪುಟ್ಟ ಮಕ್ಕಳು ಅವರಿಗೇನು ತಿಳಿಯದು ಸುಕಾಸುಮ್ಮನೆ ಮಕ್ಕಳ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications