ಅನ್ನದಾನ ಮಾಡ್ತಾರೆ, ಮಗ್ಗಿ ಪುಸ್ತಕವನ್ನೂ ಕೊಡ್ತಾರೆ ಈ ವೈದ್ಯ
ಚಾಮರಾಜನಗರ, ನವೆಂಬರ್ 19: ಕರ್ತವ್ಯದಲ್ಲಿದ್ದಾಗಿನಿಂದ ನಿವೃತ್ತಿಯಾದರೂ ಇಲ್ಲೊಬ್ಬ ವೈದ್ಯ ಮಹಾಶಯ ಅನ್ನದಾನ ಮಾಡಿ ಅನ್ನದಾಸೋಹಿಯಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಬಂಧಿಗಳಿಗೆ ಅನ್ನದಾತರಾಗಿ ನಿತ್ಯ ರಾತ್ರಿ ಊಟ ವಿತರಿಸುವ ಕಾಯಕದಲ್ಲಿ ತೊಡಗಿರುವ ಈ ನಿವೃತ್ತ ವೈದ್ಯರ ಹೆಸರೇ ಚಂದ್ರಶೇಖರ್.
ಸರ್ಕಾರಿ ವೈದ್ಯ ಸಿಬ್ಬಂದಿ ಬೇಡಿಕೆ ಈಡೇರಿಸಲು ಸಿದ್ಧ: ಕುಮಾರಸ್ವಾಮಿ
ಒಳರೋಗಿಗಳಿಗೆ ಸರ್ಕಾರವೇ ಅಹಾರ ವಿತರಿಸಿದರೇ ರೋಗಿಗಳ ಸಂಬಂಧಿಗಳು ಹೋಟೆಲ್ ಗೆ ಎಡತಾಕುವುದು ಸಾಮಾನ್ಯ. ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರ ತಜ್ಞ ಡಾ.ಚಂದ್ರಶೇಖರ್ ಸದ್ದಿಲ್ಲದೇ ರೋಗಿಗಳ ಸಂಬಂಧಿಗಳು ಹಾಗೂ ತಾಂತ್ರಿಕೇತರ ನೌಕರರಿಗೆ ಊಟ ನೀಡುತ್ತ ಬರುತ್ತಿದ್ದಾರೆ.
ಈ ನಿವೃತ್ತ ವೈದ್ಯರು ಸ್ವತಃ ತರಕಾರಿ ಕತ್ತರಿಸಿ ರುಚಿ-ಶುಚಿಯಾದ ಅನ್ನ- ಸಾಂಬಾರ್ ನ್ನು ತಯಾರಿಸುತ್ತಾರೆ. ಮಧ್ಯಾಹ್ನ ೩೦ ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಬಟ್ಟೆ ಒಗೆಯುವವರು, ಆಂಬುಲೆನ್ಸ್ ಚಾಲಕರಿಗೆ ಆಹಾರ ವಿತರಿಸಿ ಸಾಯಂಕಾಲ ಮತ್ತೇ ಅಡುಗೆ ತಯಾರಿಯಲ್ಲಿ ತೊಡಗಿ 40-50 ರೋಗಿಗಳ ಕಳೆದ 4-52 ವರ್ಷಗಳಿಂದ ಸಂಬಂಧಿಗಳಿಗೆ ರಾತ್ರಿ ಊಟ ನೀಡುತ್ತಾ ಬಂದಿದ್ದಾರೆ. ಊಟದ ಜೊತೆ ಚಕ್ಕುಲಿ, ಕೋಡುಬಳೆ, ಮದ್ದೂರು ವಡೆಯನ್ನೂ ನೀಡುವ ಮೂಲಕ ಅನ್ನದಾನದಲ್ಲೇ ಸಂತೋಷ ಕಾಣುತ್ತಾರೆ.
ಹೋಟೆಲಿನವರಿಗೆ, ಊಟದ ಮೆಸ್ ಗೆ ಹೇಳಿ ಊಟ ವಿತರಿಸಿದರೇ ಖರ್ಚು ಹೆಚ್ಚಾಗಲಿದ್ದು ಆರೋಗ್ಯವೂ ಹಾಳು. ಆದ್ದರಿಂದ, ನಾನೇ ಅಡುಗೆ ತಯಾರಿಸುತ್ತೇನೆ ಇದು ಕಷ್ಟದ ಕೆಲಸವೇನಲ್ಲ ಎನ್ನುವ ಇವರು ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಮಯದಲ್ಲಿ ಧನ ಸಹಾಯ ಮಾಡಿದ್ದಾರೆ.
ಅನಾಥ ಶವಗಳಿಗೆ ಶವಸಂಸ್ಕಾರ: ಇಲ್ಲೊಬ್ಬರು ವಿಶಿಷ್ಟ ಸಮಾಜ ಸೇವಕರು
ಮಗ್ಗಿ ಪುಸ್ತಕವನ್ನೂ ನಿಡ್ತಾರೆ!
ಕೇವಲ ಹಸಿದವರಿಗೆ ಅನ್ನದಾನವನ್ನಷ್ಟೆ ಅಲ್ಲದೇ ಗರ್ಭಿಣಿ, ಬಾಣಂತಿಯರಿಗೆ ಮಗ್ಗಿ ಪುಸ್ತಕಗಳನ್ನು ಕಳೆದ 30 ವರ್ಷದಿಂದ ವಿತರಿಸುತ್ತಾ ಬಂದಿದ್ದಾರೆ. ಅಂಗನವಾಡಿಗೆ ತೆರಳುವ ಮುನ್ನ ಮಗು ಮಗ್ಗಿ, ವರ್ಣಮಾಲೆ ಕಲಿತಾಗ ಹೆಚ್ಚಿನ ಕಲಿಕೆ, ಗ್ರಹಣ ಶಕ್ತಿ ಹೆಚ್ಚಲಿದೆ ಎಂಬುದು ಡಾ.ಚಂದ್ರಶೇಖರ್ ಅಭಿಮತದಿಂದ ಮಗ್ಗಿಪುಸ್ತಕ ನೀಡುತ್ತಿದ್ದೇವೆ ಎನ್ನುವ ಇವರು,ಮಹಿಳೆ ಸಾಕ್ಷರತೆ ಹೆಚ್ಚಾದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆಎಂಬ ಅಭಿಪ್ರಾಯ ತಿಳಿಸುತ್ತಾರೆ.
ಇದೆಂಥ ಆಸ್ಪತ್ರೆ? ಹೊಲಿಗೆ ಹಾಕೋನು ಜವಾನ, ನಿಂತು ನೋಡೋನು ವೈದ್ಯ!
ಮಗುವಿಗೂ ತಾಯಿಯೇ ಮೊದಲು ಅಕ್ಷರಾಭ್ಯಾಸ ಮಾಡಿಸಬೇಕು ಎಂಬ ಆಶಯಹೊತ್ತು ಮಗ್ಗಿ ಪುಸ್ತಕ, ಮಕ್ಕಳ ಆರೋಗ್ಯ ಪುಸ್ತಕಗಳನ್ನು ಕಳೆದ ೩೦ ವರ್ಷದಿಂದ ವಿತರಿಸುತ್ತ ಬಂದಿದ್ದಾರೆ. ಒಟ್ಟಿನಲ್ಲಿ ಅನ್ನದಾನ, ಮಹಿಳಾ ಸಾಕ್ಷರತೆಗೆ ತನ್ನ ಅಳಿಲು ಸೇವೆ ಸಲ್ಲಿಸುತ್ತಾ ಬಂದಿರುವ ಚಂದ್ರಶೇಖರ್ ಅವರು ನಿಜಾರ್ಥದಲ್ಲಿ ವೈದ್ಯೋ ನಾರಾಯಣ ಹರಿಃ ಆಗಿದ್ದಾರೆ.